* ಅಮೆರಿಕನು ನಾಲ್ಕನೇ ವರ್ಷಕ್ಕೂ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಮುಂದುವರಿದಿದೆ.* 2024–25ನೇ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಮೌಲ್ಯ ₹11.28 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.* ಈ ಅವಧಿಯಲ್ಲೇ ಚೀನಾದೊಂದಿಗೆ ಭಾರತಕ್ಕಿರುವ ವ್ಯಾಪಾರ ಅಂತರ ₹8.49 ಲಕ್ಷ ಕೋಟಿ ಆಗಿದೆ; ಅಂದರೆ ಭಾರತ ರಫ್ತು ಮಾಡುವ ಮೌಲ್ಯಕ್ಕಿಂತ ಚೀನಾದಿಂದ ಆಮದು ಮಾಡಿಕೊಳ್ಳುವ ಮೌಲ್ಯ ಹೆಚ್ಚು.* ಭಾರತ ಅಮೆರಿಕಕ್ಕೆ ಔಷಧಿಗಳು, ಅಮೂಲ್ಯ ರತ್ನಗಳು, ಪೆಟ್ರೋಲಿಯಂ ಉತ್ಪನ್ನಗಳು, ಚಿನ್ನಾಭರಣಗಳು, ಸಿದ್ಧ ಉಡುಪುಗಳು, ಕಬ್ಬಿಣ ಮತ್ತು ಉಕ್ಕು, ಎಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡುತ್ತಿದೆ.* ಅಮೆರಿಕದಿಂದ ಭಾರತ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ಕತ್ತರಿಸಿ ಪಾಲಿಶ್ ಮಾಡಿದ ವಜ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಏರ್ಕ್ರಾಫ್ಟ್, ಸ್ಪೇಸ್ಕ್ರಾಫ್ಟ್ ಮತ್ತು ಅವುಗಳ ಭಾಗಗಳು, ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ.