Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದ ವಿಮಾ ಕ್ಷೇತ್ರದಲ್ಲಿ 100% ಎಫ್ಡಿಐ (FDI): ಗಸೆಟ್ ಅಧಿಸೂಚನೆ ಪ್ರಕಟ - ವಿಮಾ ಕ್ರಾಂತಿಗೆ ಮುನ್ನುಡಿ!
1 ಜನವರಿ 2026
* ಭಾರತ ಸರ್ಕಾರವು ವಿಮಾ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿ
100% ವಿದೇಶಿ ನೇರ ಹೂಡಿಕೆ (FDI)
ಗೆ ಅವಕಾಶ ಕಲ್ಪಿಸುವ ಅಂತಿಮ ನಿಯಮಗಳನ್ನು ಅಧಿಸೂಚಿಸಿದೆ. ಈ ಕ್ರಮವು ಜಾಗತಿಕ ಬಂಡವಾಳ ಆಕರ್ಷಣೆ, ಸ್ಪರ್ಧಾತ್ಮಕತೆ ಹೆಚ್ಚಳ ಹಾಗೂ ವಿಮಾ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಹಣಕಾಸು ಸಚಿವಾಲಯವು ವಿಮಾ ಕಂಪನಿಗಳ ಮಂಡಳಿಯಲ್ಲಿ ಭಾರತೀಯ ನಿರ್ದೇಶಕರ ಬಹುಮತ ಕಡ್ಡಾಯವನ್ನು ರದ್ದುಪಡಿಸಿದೆ. ಆದರೆ
CEO, MD
ಅಥವಾ
Chairperson
ಹುದ್ದೆಗಳಲ್ಲೊಂದು ಭಾರತೀಯ ನಿವಾಸಿಯದ್ದಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಮೂಲಕ ವಿದೇಶಿ ಬಂಡವಾಳ ಆಕರ್ಷಣೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ನಡುವಿನ ಸಮತೋಲನವನ್ನು ಸರ್ಕಾರ ಸಾಧಿಸಿದೆ.
* ಹೊಸ ನಿಯಮಗಳ ಮುಖ್ಯ ಲಕ್ಷಣಗಳು :
ಹೊಸ ನಿಯಮಗಳು ವಿಮಾ ಕ್ಷೇತ್ರದ ಆಡಳಿತಾತ್ಮಕ ನಿರ್ಬಂಧಗಳನ್ನು ಸಡಿಲಗೊಳಿಸುತ್ತವೆ:
=> ಭಾರತೀಯ ನಿರ್ದೇಶಕರ ಬಹುಮತ ಕಡ್ಡಾಯವಿಲ್ಲ
=> ಪ್ರಮುಖ ನಿರ್ವಹಣಾ ಸಿಬ್ಬಂದಿಯಲ್ಲಿ ಭಾರತೀಯರ ನಿರ್ದಿಷ್ಟ ಸಂಖ್ಯೆಯ ಅವಶ್ಯಕತೆ ಇಲ್ಲ
=> ಕನಿಷ್ಠ ಒಂದು ಉನ್ನತ ಹುದ್ದೆ ಭಾರತೀಯ ನಿವಾಸಿಗೆ ಕಡ್ಡಾಯ
=> ಮಂಡಳಿ ರಚನೆಯಲ್ಲಿ ಹೆಚ್ಚಿನ ಲವಚಿಕತೆ
=> ವಿಮಾ ಕ್ಷೇತ್ರದಲ್ಲಿ
Ease of Doing Business
ಗೆ ಉತ್ತೇಜನ
* ನಿಯಂತ್ರಣಾತ್ಮಕ ಬದಲಾವಣೆಗಳು:
ಈ ಅಧಿಸೂಚನೆಯು ಹಲವು ಪ್ರಮುಖ ನಿಯಂತ್ರಣ ತಿದ್ದುಪಡಿಗಳನ್ನು ಒಳಗೊಂಡಿದೆ:
=>
Rule 4A
ಅನ್ನು ತೆಗೆದುಹಾಕಲಾಗಿದೆ. ಇದರಲ್ಲಿ:
- ಸಾಲ್ವೆನ್ಸಿ ಮರ್ಜಿನ್ 1.2 ಕ್ಕಿಂತ ಕಡಿಮೆಯಾದರೆ ಲಾಭ ವಿತರಣೆ ನಿರ್ಬಂಧ
- ಕನಿಷ್ಠ ಸ್ವತಂತ್ರ ನಿರ್ದೇಶಕರ ಕಡ್ಡಾಯ
=>
FEMA Regulations, 2000
ಬದಲಾಗಿ
FEMA (Non-Debt Instrument) Rules, 2019
ಗೆ ಉಲ್ಲೇಖ
=>74% FDI ಮಿತಿಗೆ ಸಂಬಂಧಿಸಿದ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ
=> “Insurance Act, 1938 ನಲ್ಲಿ ನಿರ್ಧರಿಸಲಾದ ಮಿತಿ” ಎಂದು ಬದಲಾವಣೆ
=> ನಿಯಮಗಳು
ಡಿಸೆಂಬರ್ 30, 2025
ರಿಂದ ಜಾರಿಗೆ (ಗಜೆಟ್ ಪ್ರಕಟಣೆ ದಿನಾಂಕ)
* ತೆಗೆದುಹಾಕಲಾದ ನಿರ್ಬಂಧಗಳು:
ವಿದೇಶಿ ಹೂಡಿಕೆ ಹೊಂದಿರುವ ವಿಮಾ ಕಂಪನಿಗಳ ಮೇಲಿನ ಕೆಳಗಿನ ನಿರ್ಬಂಧಗಳನ್ನು ರದ್ದುಪಡಿಸಲಾಗಿದೆ:
=> ಲಾಭಾಂಶ ವಾಪಸ್ಸು (Dividend Repatriation)ಗೆ IRDAI ಪೂರ್ವಾನುಮತಿ ಅಗತ್ಯವಿಲ್ಲ
=> ವಿದೇಶಿ ಪ್ರೋಮೋಟರ್ ಅಥವಾ ಗುಂಪು ಕಂಪನಿಗಳಿಗೆ ಪಾವತಿಗಳ ಮಿತಿ ಇಲ್ಲ
=> ಮಂಡಳಿ ಮತ್ತು ಪ್ರಮುಖ ನಿರ್ವಹಣಾ ರಚನೆ ಕುರಿತು ನಿಯಂತ್ರಕನ ಕಟ್ಟುನಿಟ್ಟಿನ ನಿಯಮಗಳು ಇಲ್ಲ
ಇವು ಕಂಪನಿಗಳಿಗೆ ಹೆಚ್ಚಿನ ಕಾರ್ಯಾಚರಣಾ ಸ್ವಾತಂತ್ರ್ಯ ಒದಗಿಸುತ್ತವೆ.
* ವಿಮಾ ಕ್ಷೇತ್ರದಲ್ಲಿ 100% FDIಗೆ ಮಹತ್ವ :
=> ದೀರ್ಘಕಾಲಿಕ ವಿದೇಶಿ ಬಂಡವಾಳ ಹರಿವು
=> ವಿಮಾ ಕಂಪನಿಗಳ ಹಣಕಾಸು ಸ್ಥಿರತೆ ಮತ್ತು ಅಪಾಯ ತಾಳುವ ಸಾಮರ್ಥ್ಯ ಹೆಚ್ಚಳ
=> ಜಾಗತಿಕ ಉತ್ತಮ ಪದ್ಧತಿ ಮತ್ತು ನವೀನತೆಗೆ ಉತ್ತೇಜನ
=> “ಸಬ್ಕಾ ಬೀಮಾ”
ದೃಷ್ಟಿಕೋನಕ್ಕೆ ಬೆಂಬಲ
=> ಭಾರತೀಯ ನಾಯಕತ್ವ ಕಡ್ಡಾಯದ ಮೂಲಕ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ
* ಭಾರತದಲ್ಲಿ ವಿಮಾ ಕ್ಷೇತ್ರವು
IRDAI
ನಿಯಂತ್ರಣದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದೇಶಿ ನೇರ ಹೂಡಿಕೆ (FDI) ಮಿತಿಯನ್ನು ಹಂತ ಹಂತವಾಗಿ 26%ರಿಂದ 49%, ನಂತರ 74%ಕ್ಕೆ ಹಾಗೂ ಈಗ 100%ಕ್ಕೆ ಹೆಚ್ಚಿಸಲಾಗಿದೆ.
ಬಜೆಟ್ 2025
ರಲ್ಲಿ ಈ 100% FDIಗೆ ಅಧಿಕೃತ ಘೋಷಣೆ ಮಾಡಲಾಗಿದ್ದು, ಇದರ ಉದ್ದೇಶ ವಿಮಾ ಕ್ಷೇತ್ರದಲ್ಲಿ ಬಂಡವಾಳ ಲಭ್ಯತೆ ಹೆಚ್ಚಿಸುವುದು, ವಿಮಾ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ಉತ್ಪನ್ನ ನವೀನತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವುದಾಗಿದೆ.
Take Quiz
Loading...