* ಭಾರತವು 2026ರಲ್ಲಿ ಗಗನಯಾನ ಪ್ರಯಾಣಿಕರ ಸಂಚಾರದ ವೃದ್ಧಿದರದಲ್ಲಿ ನೆರೆರಾಜ್ಯ ಚೀನಾವನ್ನು ಮೀರಲಿದೆ ಎಂದು ಏರ್ಪೋರ್ಟ್ಗಳ ಸಂಘಟನೆ ಎಸಿಐ (Airports Council International) ತಿಳಿಸಿದೆ. ಆ ವರ್ಷ ಭಾರತದಲ್ಲಿ 10.5% ವೃದ್ಧಿದರವಾಗಲಿದೆ.* ಚೀನಾದಲ್ಲಿ ಅದು 8.9% ಆಗಿರಲಿದೆ. 2027ರಲ್ಲಿಯೂ ಭಾರತ 10.3% ಮತ್ತು ಚೀನಾ 7.2% ವೃದ್ಧಿದರ ಹೊಂದಿರುತ್ತದೆ.* 2023-27 ಅವಧಿಗೆ ಭಾರತದಲ್ಲಿ ಸಂಯುಕ್ತ ವಾರ್ಷಿಕ ವೃದ್ಧಿದರ (CAGR) 9.5% ಆಗಿದ್ದು, ಚೀನಾದ 8.8%ಕ್ಕಿಂತ ಹೆಚ್ಚಿನದಾಗಿದೆ.* 2023 ರಿಂದ 2053ರ ಅವಧಿಗೆ ಭಾರತ 5.5% CAGR ನೊಂದಿಗೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಗಗನಯಾನ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ, ಚೀನಾದ CAGR 3.8% ಆಗಿರುತ್ತದೆ.* 2023ರಲ್ಲಿ ಪ್ರತಿವ್ಯಕ್ತಿಗೆ 0.1 ವಿಮಾನಯಾನ ಪ್ರವಾಸ ಇದ್ದರೆ, 2043ರ ಹೊತ್ತಿಗೆ ಅದು 0.4ಕ್ಕೆ ಏರಲಿದೆ ಎಂದು ಎಸಿಐ ತಿಳಿಸಿದೆ.* ಈ ಕ್ಷಣಕ್ಕೆ ಭಾರತದಲ್ಲಿ 159 ಕಾರ್ಯನಿರ್ವಹಣೆಯಲ್ಲಿರುವ ವಿಮಾನ ನಿಲ್ದಾಣಗಳಿದ್ದು, ಮುಂದಿನ ಐದು ವರ್ಷಗಳಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ ಯೋಜನೆ ಇರುತ್ತದೆ. * ದೇಶೀಯ ಏರ್ಲೈನ್ಸ್ಗಳು 1,700ಕ್ಕಿಂತ ಹೆಚ್ಚು ವಿಮಾನಗಳನ್ನು ಆರ್ಡರ್ ಮಾಡಿವೆ.