Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದ ವಾಯುಮಾಲಿನ್ಯದ ಆತಂಕಕಾರಿ ವರದಿ: 1,787 ನಗರಗಳಲ್ಲಿ ವಿಷಗಾಳಿ! ಕೇವಲ 4% ನಗರಗಳಿಗಷ್ಟೇ ಸರ್ಕಾರದ ರಕ್ಷಣೆ?
13 ಜನವರಿ 2026
➤
ದೇಶದ ವಾಯುಮಾಲಿನ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು,
ಉಪಗ್ರಹ ಆಧರಿತ ಅಧ್ಯಯನವೊಂದು ಆತಂಕಕಾರಿ ವಾಸ್ತವಾಂಶಗಳನ್ನು ಬಹಿರಂಗಪಡಿಸಿದೆ
. ಇಂಧನ ಹಾಗೂ ಶುದ್ಧಗಾಳಿ ಸಂಶೋಧನಾ ಕೇಂದ್ರ (Centre for Research on Energy and Clean Air – CREA) ನಡೆಸಿದ ಅಧ್ಯಯನದ ಪ್ರಕಾರ,
ಭಾರತದ 4,041 ನಗರಗಳ ಪೈಕಿ 1,787 ನಗರಗಳು ದೀರ್ಘಕಾಲಿಕ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿವೆ
. ಈ ನಗರಗಳ ಪೈಕಿ
ಕೇವಲ 130 ನಗರಗಳು ಮಾತ್ರ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (NCAP)
ವ್ಯಾಪ್ತಿಗೆ ಸೇರಿವೆ. ಅಂದರೆ, ದೇಶದ
ದೀರ್ಘಕಾಲಿಕವಾಗಿ ಮಾಲಿನ್ಯಗೊಂಡ ನಗರಗಳಲ್ಲಿ ಕೇವಲ 4% ನಗರಗಳಿಗಷ್ಟೇ ಸರ್ಕಾರದ ವಿಶೇಷ ಶುದ್ಧಗಾಳಿ ಕ್ರಮಗಳು ಲಭ್ಯವಿವೆ
.
➤
ಅಧ್ಯಯನದ ಪ್ರಕಾರ, ದೇಶದ ಬಹುತೇಕ ನಗರಗಳಲ್ಲಿ
ಪಿಎಂ 2.5 (PM2.5)
ಎನ್ನುವ ಸೂಕ್ಷ್ಮ ಕಣಗಳು ಅಧಿಕ ಪ್ರಮಾಣದಲ್ಲಿ ಕಂಡುಬಂದಿವೆ. ಈ ಕಣಗಳು
ಕ್ಯಾನ್ಸರ್, ಶ್ವಾಸಕೋಶ ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳಿಗೆ ನೇರ ಕಾರಣವಾಗುತ್ತವೆ
. CREA ವಿಶ್ಲೇಷಣೆಯಂತೆ,
ಸುಮಾರು 44% ಭಾರತೀಯ ನಗರಗಳು ವಾಯುಮಾಲಿನ್ಯ ಕಡಿಮೆ ಮಾಡುವಲ್ಲಿ ಯಾವುದೇ ಗಮನಾರ್ಹ ಸುಧಾರಣೆಯನ್ನು ಸಾಧಿಸಿಲ್ಲ
, ಇದು ತಾತ್ಕಾಲಿಕ ಸಮಸ್ಯೆಯಲ್ಲದೆ, ಮೂಲಭೂತ ವ್ಯವಸ್ಥಾತ್ಮಕ ಸಮಸ್ಯೆ ಎನ್ನುವುದನ್ನು ತೋರಿಸುತ್ತದೆ.
➤ 2025ರ ಪಿಎಂ 2.5 ಶ್ರೇಯಾಂಕ: ಅತ್ಯಂತ ಮಾಲಿನ್ಯಗೊಂಡ ನಗರಗಳು:
1. ಬರ್ನಿಹಾಟ್ (ಮೆಘಾಲಯ)
– 100 µg/m³
2. ದೆಹಲಿ
– 96 µg/m³
3. ಘಾಜಿಯಾಬಾದ್ (ಉತ್ತರ ಪ್ರದೇಶ)
– 93 µg/m³
ಇವು ದೇಶದ ಅತ್ಯಂತ ಮಾಲಿನ್ಯಗೊಂಡ ನಗರಗಳಾಗಿವೆ.ಈ ಪಟ್ಟಿಯಲ್ಲಿ
ನೋಯ್ಡಾ ನಾಲ್ಕನೇ ಸ್ಥಾನದಲ್ಲಿದ್ದು
, ನಂತರ
ಗುರುಗ್ರಾಮ್, ಗ್ರೇಟರ್ ನೋಯ್ಡಾ, ಭಿವಾಡಿ, ಹಾಜಿಪುರ, ಮುಜಾಫರ್ನಗರ ಮತ್ತು ಹಾಪುರ್
ನಗರಗಳಿವೆ.
➤
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (NCAP)
ಅನ್ನು 2019ರ ಜನವರಿಯಲ್ಲಿ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ 130 ನಗರಗಳಲ್ಲಿ ಮಾಲಿನ್ಯ ನಿಯಂತ್ರಣ ಗುರಿ ಇಡಲಾಗಿತ್ತು.ಎರಡನೇ ಹಂತದಲ್ಲಿ (2025–26ರವರೆಗೆ)
ಪಿಎಂ ಕಣಗಳನ್ನು 40% ಕಡಿಮೆ ಮಾಡುವ ಗುರಿ
ಹೊಂದಲಾಗಿದೆ. ಈ ಉದ್ದೇಶಕ್ಕಾಗಿ
₹19,614 ಕೋಟಿ
ಅನುದಾನವನ್ನು ಮೀಸಲಿಡಲಾಗಿದ್ದು, ಇದರಲ್ಲಿ ಅನೇಕ ರಾಜ್ಯಗಳು ಭಾಗಶಃ ಮಾತ್ರ ಬಳಕೆ ಮಾಡಿವೆ. ಇದುವರೆಗೆ
₹13,415 ಕೋಟಿ ಬಿಡುಗಡೆಗೊಂಡಿದ್ದು
, ಅದರ ಪೈಕಿ
₹9,929 ಕೋಟಿ (ಶೇ.74)
ಮಾತ್ರ ಉಪಯೋಗಿಸಲಾಗಿದೆ.
➤
ಅಧ್ಯಯನದ ಪ್ರಕಾರ,
ವಾಯುಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ನಿರಂತರವಾಗಿ ಮೀರಿ ಹೋಗುವ (Non-attainment cities)
ನಗರಗಳ ಸಂಖ್ಯೆ: ಉತ್ತರ ಪ್ರದೇಶ – 416 ರಾಜಸ್ಥಾನ – 158 ಗುಜರಾತ್ – 152 ಮಧ್ಯಪ್ರದೇಶ – 143 ಪಂಜಾಬ್ ಮತ್ತು ಬಿಹಾರ – ತಲಾ 136 ಪಶ್ಚಿಮ ಬಂಗಾಳ – 124 ಇದು ಉತ್ತರ ಭಾರತದ ವಾಯುಮಾಲಿನ್ಯ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ.
# NCAP ವ್ಯಾಪ್ತಿಯ 130 ನಗರಗಳಲ್ಲಿ:
28 ನಗರಗಳಲ್ಲಿ ನಿರಂತರ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳೇ ಇಲ್ಲ ಉಳಿದ 102 ನಗರಗಳಲ್ಲಿ, 100 ನಗರಗಳು ಪಿಎಂ10 ಮಟ್ಟದಲ್ಲಿ ಶೇ.80ಕ್ಕಿಂತ ಅಧಿಕ ಪ್ರಮಾಣ ದಾಖಲಿಸಿವೆ.
ಪಿಎಂ10 ನಿಯಂತ್ರಣದಲ್ಲಿ: 23 ನಗರಗಳು 40% ಗುರಿ ಸಾಧನೆ 28 ನಗರಗಳು 21–40% ಸುಧಾರಣೆ 26 ನಗರಗಳು ಅಲ್ಪ ಸುಧಾರಣೆ 23 ನಗರಗಳಲ್ಲಿ ಮಾಲಿನ್ಯ ಮಟ್ಟ ಇನ್ನಷ್ಟು ಹೆಚ್ಚಳ
# ದೆಹಲಿ ಪಿಎಂ10 ಮಾಲಿನ್ಯದಲ್ಲಿ ಅಗ್ರಸ್ಥಾನ :
1. ದೆಹಲಿ
– 197 µg/m³ (ರಾಷ್ಟ್ರೀಯ ಮಾನದಂಡಕ್ಕಿಂತ 3 ಪಟ್ಟು ಹೆಚ್ಚು)
2. ಘಾಜಿಯಾಬಾದ್
– 190 µg/m³
3. ಗ್ರೇಟರ್ ನೋಯ್ಡಾ
– 188 µg/m³
# ಟಾಪ್ 50 ಪಿಎಂ10 ಮಾಲಿನ್ಯ ನಗರಗಳಲ್ಲಿ:
1. ರಾಜಸ್ಥಾನ
– 18 ನಗರಗಳು
2. ಉತ್ತರ ಪ್ರದೇಶ
– 10
3. ಮಧ್ಯಪ್ರದೇಶ
– 5
4. ಬಿಹಾರ ಮತ್ತು ಒಡಿಶಾ
– ತಲಾ 4
➤
CREAನ ಭಾರತ ವಿಶ್ಲೇಷಕ
ಮನೋಜ್ ಕುಮಾರ್
ಅವರು ಹೇಳುವಂತೆ, ಭಾರತದಲ್ಲಿ ವಾಯುಮಾಲಿನ್ಯ ಸಮಸ್ಯೆ ನಿವಾರಣೆಗೆ
ಪಿಎಂ10ಕ್ಕಿಂತ ಪಿಎಂ2.5 ಹಾಗೂ ಅದರ ಮೂಲ ಅನಿಲಗಳಾದ ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್ ಮೇಲೆ ಹೆಚ್ಚು ಗಮನ ಹರಿಸಬೇಕು
.
Take Quiz
Loading...