* ಚಂದ್ರಯಾನ-3ರ ಯಶಸ್ಸಿನ ಬಳಿಕ ದೇಶದ ಬಾಹ್ಯಾಕಾಶ ಕ್ಷೇತ್ರದ ಆಯಾಮವೂ ಬದಲಾಗಿದ್ದು, ಇಸ್ರೋ ಅಧ್ಯಕ್ಷ ಎನ್‌. ಸೋಮನಾಥ್‌ ರವರು ಅಮೆರಿಕದಲ್ಲಿ ಅಂತರಿಕ್ಷ ನೌಕೆಯ ಅಭಿವೃದ್ಧಿಯಲ್ಲಿ ತೊಡಗಿರುವ ಪರಿಣತರು ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳುವಂತೆ ಭಾರತಕ್ಕೆ ಕೋರಿದ್ದಾರೆ ಎಂದು ಹೇಳಿದ್ದಾರೆ.* ಭಾರತವು ಪ್ರಬಲ ರಾಷ್ಟ್ರವಾಗಿದ್ದು, ಭಾರತ ದೇಶದ ಜ್ಞಾನ ಮತ್ತು ಬುದ್ಧಿಶಕ್ತಿಯು ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಅಗ್ರ ಸ್ಥಾನ ಪಡೆದಿದೆ. * ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಭಾರತವು ಅತ್ಯುತ್ತಮ ಉಪಕರಣಗಳು ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಶಕ್ತವಾಗಿದೆ ಎಂದು ಹೇಳಲಾಗಿದೆ.