* ಭಾರತ ತನ್ನ ಸೇನಾ ಶಕ್ತಿಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ 'ಭಾರ್ಗವಾಸ್ತ್ರ' ಎಂಬ ಡೋನ್ ಪ್ರತಿರೋಧಕ ವ್ಯವಸ್ಥೆಯನ್ನು ಸೇರ್ಪಡೆಗೊಳಿಸಿದೆ.* ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆ ವೇಳೆ ಜಗತ್ತಿನ ಗಮನ ಸೆಳೆದ ಭಾರತೀಯ ಬತ್ತಳಿಕೆ, ಇದೀಗ ಈ ಹೊಸ ತಂತ್ರಜ್ಞಾನದಿಂದ ಇನ್ನಷ್ಟು ಬಲಿಷ್ಠವಾಗಿದೆ.* 'ಭಾರ್ಗವಾಸ್ತ್ರ' ಭಾರತದ ಸ್ವದೇಶಿ ಸಂಸ್ಥೆಯಾದ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ (ಎಸ್ಡಿಎಎಲ್) ಅಭಿವೃದ್ಧಿಪಡಿಸಿರುವ ಕಡಿಮೆ ವೆಚ್ಚದ ಮೈಕ್ರೋ ರಾಕೆಟ್ಗಳ ಆಧಾರಿತ ವ್ಯವಸ್ಥೆ. ಇದು ಡೋನ್ಗಳು ಗುಂಪು ಗುಂಪಾಗಿ ದಾಳಿ ಮಾಡಿದಾಗ ಪ್ರತಿರೋಧ ನೀಡಲು ಶಕ್ತಿಯುತವಾಗಿದೆ.* ಒಡಿಶಾದ ಗೋಪಾಲಪುರದ ಸೀವರ್ಡ್ ಫೈರಿಂಗ್ ರೇಂಜ್ನಲ್ಲಿ ಈ ಪ್ರತಿರೋಧಕ ವ್ಯವಸ್ಥೆಗೆ ತೀವ್ರ ಪರೀಕ್ಷೆ ನಡೆಸಲಾಯಿತು.* ಮೂರು ಹಂತದ ಪರೀಕ್ಷೆಯಲ್ಲಿ ನಾಲ್ಕು ರಾಕೆಟ್ಗಳನ್ನು ಹಾರಿಸಿ ಯಶಸ್ವಿಯಾಗಿ ಗುರಿಗಳನ್ನು ಹೊಡೆದುರುಳಿಸಲಾಯಿತು.* ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ಎಸ್ಡಿಎಎಲ್ ತಿಳಿಸಿದೆ.