* 2024-25 ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಮೊತ್ತ 23,622 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.* ಹಿಂದಿನ ಆರ್ಥಿಕ ವರ್ಷದೊಂದಿಗೆ ಹೋಲಿಸಿದರೆ ಶೇ.12.04ರಷ್ಟು ಬೆಳವಣಿಗೆ ನಡೆದಿದೆ.* 2029ರ ವೇಳೆಗೆ ರಕ್ಷಣಾ ರಫ್ತನ್ನು 50,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.* ರಕ್ಷಣಾ ಸಾರ್ವಜನಿಕ ವಲಯದ ಕಂಪನಿಗಳಿಂದ 15,233 ಕೋಟಿ ರೂ. (ಶೇ.42.85) ರಫ್ತು ಆದಾಯವಾಗಿದೆ.* ಖಾಸಗಿ ವಲಯದ ಕಂಪನಿಗಳಿಂದ 8,389 ಕೋಟಿ ರೂ. ಆದಾಯ ಬಂದಿದೆ.* ಭಾರತವು ಸ್ವದೇಶಿ ಮಿಲಿಟರಿ ಉಪಕರಣಗಳ ತಯಾರಿಕೆಗೆ ಆದ್ಯತೆ ನೀಡಿದ್ದು, ಈವರೆಗೆ 80 ದೇಶಗಳಿಗೆ ರಕ್ಷಣಾ ಸಾಮಗ್ರಿ ರಫ್ತು ಮಾಡಲಾಗಿದೆ.* ರಕ್ಷಣಾ ಉದ್ಯಮವನ್ನು ಉತ್ತೇಜಿಸಲು ಪರವಾನಗಿ ಕಾರ್ಯವಿಧಾನ ಸರಳೀಕರಣ, ಅವಧಿ ವಿಸ್ತರಣೆ ಮೊದಲಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.