* ಭಾರತವು ರಕ್ಷಣಾ ಬಜೆಟ್ ಅನ್ನು 75 ಶತಕೋಟಿ ಡಾಲರ್ಗೆ ಹೆಚ್ಚಿಸಿಕೊಂಡಿದ್ದು, ಜಾಗತಿಕ ಮಿಲಿಟರಿ ಶಕ್ತಿಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.* ಈ ಹೂಡಿಕೆ ಆಧುನೀಕರಣ, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಕಾರ್ಯತಂತ್ರದ ಸಿದ್ಧತೆಯನ್ನು ಪ್ರತಿಬಿಂಬಿಸಿ, ರಾಷ್ಟ್ರೀಯ ಭದ್ರತೆಗೆ ಕೇಂದ್ರದ ಬದ್ದತೆಯನ್ನು ತೋರಿಸುತ್ತದೆ.* ಪ್ರಸಕ್ತ ವರ್ಷದಲ್ಲಿ ಜಗತ್ತಿನ ಹಲವಾರು ರಾಷ್ಟ್ರಗಳು ಮಿಲಿಟರಿಯಲ್ಲಿ ಹೆಚ್ಚಿನ ಹೂಡಕೆ ಮಾಡುತ್ತಿವೆ. ವಿಶ್ವದ ಪ್ರಮುಖ ದೇಶಗಳು ತಮ್ಮ ಸಶಸ್ತ್ರಪಡೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ.* ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸೇನೆಗಳು ಕಾರ್ಯತಂತ್ರದ ಸ್ಥಾನಗಳನ್ನು ಬಲಪಡಿಸಿಕೊಳ್ಳುತ್ತಿವೆ.* ಎದುರಾಗುತ್ತಿರುವ, ಎದುರಾಗಬಹುದಾದ ಜಾಗತಿಕ ಬೆದರಿಕೆಗಳನ್ನು ಎದುರಿಸಲು ಕ್ಷಿಪಣಿ ವ್ಯವಸ್ಥೆಗಳಿಂದ ನೌಕಾಪಡೆವರೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. , ಪ್ರಸಕ್ತ ವರ್ಷದ ರಕ್ಷಣಾ ಬಜೆಟ್ ಶ್ರೇಯಾಂಕ ಹಿಂದೆಂದಿಗಿಂತಲೂ ಕುತೂಹಲಕಾರಿಯಾಗಿವೆ.* ರಕ್ಷಣಾ ಹೂಡಿಕೆಯ ಅಗ್ರ ಹತ್ತು ರಾಷ್ಟ್ರಗಳು(2025)1) ಅಮೆರಿಕ- 895 ಶತಕೋಟಿ ಡಾಲರ್2) ಚೀನಾ- 266.85 ಶತಕೋಟಿ ಡಾಲರ್3) ರಷ್ಯಾ- 126 ಶತಕೋಟಿ4) ಭಾರತ - 75 ಶತಕೋಟಿ ಡಾಲರ್5) ಸೌದಿ ಅರೇಬಿಯಾ- 74.76 ಶತಕೋಟಿ6) ಇಂಗ್ಲೆಂಡ್- 71.5 ಶತಕೋಟಿ ಡಾಲರ್7) ಜಪಾನ್- 57 ಶತಕೋಟಿ ಡಾಲರ್8) ಆಸ್ಟ್ರೇಲಿಯಾ -55.7 ಶತಕೋಟಿ ಡಾಲರ್9) ಫ್ರಾನ್ಸ್ -55 ಶತಕೋಟಿ ಡಾಲರ್10) ಉಕ್ರೇನ್ - 53.7 ಶತಕೋಟಿ ಡಾಲರ್ ಮೀಸಲಿಟ್ಟಿವೆ.