* ಭಾರತದ ಪುರುಷರ ಕಾಂಪೌಂಡ್ ಆರ್ಚರಿ ತಂಡವು ವಿಶ್ವ ಚಾಂಪಿಯನ್ಷಿಪ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. ರಿಷಭ್ ಯಾದವ್, ಅಮನ್ ಸೈನಿ ಮತ್ತು ಪ್ರಥಮೇಶ್ ಫ್ಯೂಗೆ ಅವರನ್ನು ಒಳಗೊಂಡ ತಂಡವು ಫೈನಲ್ನಲ್ಲಿ ಫ್ರಾನ್ಸ್ನ್ನು 235-233ರಿಂದ ಮಣಿಸಿದೆ.* ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ, ನಂತರ ಲಯ ಕಂಡುಕೊಂಡು ಕೊನೆಯ ಸುತ್ತಿನಲ್ಲಿ ನಿಖರ ಗುರಿಯಿಟ್ಟು ಗೆಲುವು ಸಾಧಿಸಿತು.* ಮಹಿಳಾ ತಂಡವು ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿ ಯಾವುದೇ ಪದಕ ಗೆಲ್ಲದೆ ನಿರಾಶೆ ಮೂಡಿಸಿತು.* ಮಿಶ್ರ ವಿಭಾಗದಲ್ಲಿ ರಿಷಭ್ ಯಾದವ್ ಮತ್ತು ಜ್ಯೋತಿ ಸುರೇಖಾ ವೆನ್ನಮ್ ಜೋಡಿ ಬೆಳ್ಳಿ ಗೆದ್ದಿದೆ. ಫೈನಲ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ 155–157 ಅಂಕಗಳಿಂದ ಸೋಲೊಪ್ಪಿಕೊಂಡರು. ಆರಂಭದಲ್ಲಿ ಮುನ್ನಡೆ ಪಡೆದರೂ, ಬಳಿಕ ಅದನ್ನು ಕಾಯ್ದುಕೊಳ್ಳಲು ವಿಫಲರಾದರು.* ಭಾರತವು ಈ ಬಾರಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡು ಉತ್ತಮ ಪ್ರದರ್ಶನ ತೋರಿತು.