* ತಮಿಳುನಾಡಿನ ಕಲ್ಪಕಂನಲ್ಲಿ ನಿರ್ಮಿಸಲಾದ ಭಾರತದ ಮೊದಲ ಸ್ವದೇಶಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) 2026ರ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಇದು ಭಾರತದ ಮೂರು ಹಂತಗಳ ಪರಮಾಣು ಇಂಧನ ಯೋಜನೆಯ ಎರಡನೇ ಹಂತದ ಮಹತ್ವದ ಸಾಧನೆ ಆಗಿದ್ದು, ಬಳಕೆಯಾದ ವಿಕಿರಣಶೀಲ ತ್ಯಾಜ್ಯವನ್ನು ಮರುಬಳಕೆ ಮಾಡಿ ವಿದ್ಯುತ್ ಉತ್ಪಾದನೆ ಮಾಡುವ ಲಕ್ಷ್ಯ ಹೊಂದಿದೆ.* ಈ ರಿಯಾಕ್ಟರ್ ಪ್ಲುಟೋನಿಯಂ ಆಧಾರಿತ ಮಿಶ್ರ ಆಕ್ಸೈಡ್ ಅನ್ನು ಇಂಧನವಾಗಿ ಮತ್ತು ದ್ರವರೂಪದ ಸೋಡಿಯಂ ಅನ್ನು ಕೂಲೆಂಟ್ ಆಗಿ ಬಳಸುತ್ತದೆ. ಇಂತಹ ತಂತ್ರಜ್ಞಾನ ಭಾರತದ ಪರಣಣು ವಿದ್ಯುತ್ ಕ್ಷೇತ್ರದಲ್ಲಿ ಹೊಸ ಹೆಜ್ಜೆಯಾಗಿದೆ.* ಇತರೆ ಅಣು ಸ್ಥಾವರಗಳಲ್ಲಿ ಬಳಕೆಯಾದ ಇಂಧನವನ್ನೂ ಪುನಃ ಬಳಸುವ ಸಾಮರ್ಥ್ಯ ಇದರಲ್ಲಿ ಇದೆ. ಈ ಘಟಕವನ್ನು ಭಾರತೀಯ ನಾಭಿಕೀಯಾ ವಿದ್ಯುತ್ ನಿಗಮ (BHAVINI) ಅಭಿವೃದ್ಧಿಪಡಿಸಿದೆ.* 2024ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಥಾವರಕ್ಕೆ ಇಂಧನ ಭರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ವಿವಿಧ ಹಂತಗಳ ಪರೀಕ್ಷೆಗಳೂ ಯಶಸ್ವಿಯಾಗಿ ನಡೆಸಲಾಗಿದೆ.* ಇದರಿಂದ ಥೋರಿಯಂ ಆಧಾರಿತ ರಿಯಾಕ್ಟರ್ಗಳಿಗೆ ಈ ಘಟಕದ ಇಂಧನವನ್ನು ಬಳಸುವ ಅವಕಾಶಗಳೂ ಸೃಜಿಸಲಾಗಿದೆ.* ಭಾರತ 100 ಗಿಗಾ ವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಗುರಿ ಹೊಂದಿದ್ದು, ಪ್ರಸ್ತುತ 8.18 ಜಿವಿ ಸಾಮರ್ಥ್ಯದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 7.30 ಜಿವಿ ಘಟಕಗಳು ನಿರ್ಮಾಣ ಹಂತದಲ್ಲಿದ್ದು, 2031–32ರ ಹೊತ್ತಿಗೆ ಒಟ್ಟು ಸಾಮರ್ಥ್ಯ 22.48 ಜಿವಿಗೆ ತಲುಪಲಿದೆ.* ಲಘು ಮತ್ತು ಅತಿ ಒತ್ತಡದ ಹೆವಿ ವಾಟರ್ ರಿಯಾಕ್ಟರ್ಗಳ ಸಹಿತ ಒಟ್ಟು 55 ಜಿವಿ ಸಾಮರ್ಥ್ಯದ ಘಟಕಗಳು ಸ್ಥಾಪನೆಯಾಗಿವೆ. ಕಲ್ಪಕಂನ PFBR ಇದರಲ್ಲಿ 3.80 ಜಿವಿ ಕೊಡುಗೆ ನೀಡಲಿದೆ. ಹೆಚ್ಚಿನ ಸಾಮರ್ಥ್ಯಕ್ಕಾಗಿ ಹೊಸ ತಂತ್ರಜ್ಞಾನಗಳಿಗಾಗಿ ಖಾಸಗಿ ಸಂಸ್ಥೆಗಳ ಸಹಕಾರವನ್ನೂ ಪರಿಗಣಿಸಲಾಗಿದೆ.