* ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿಯಾದ ಮೊದಲ ಮಹಿಳೆಯಾದ ನಂತರ ಇತಿಹಾಸ ನಿರ್ಮಿಸಿದ ಹಿರಿಯ ರಾಜತಾಂತ್ರಿಕ ರುಚಿರಾ ಕಾಂಬೋಜ್ ಅವರು ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದ ನಂತರ ಜೂನ್ 1 ರಂದು ನಿವೃತ್ತರಾದರು ಎಂದು ಜೂನ್ 01 ರಂದು (ಶನಿವಾರ) ಘೋಷಿಸಿದರು. * 1987ರಲ್ಲಿ ರುಚಿರಾ ಕಾಂಬೋಜ್ ಅವರು ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಯಾಗಿದ್ದರು. ಸುದೀರ್ಘ 35 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. * ರುಚಿರಾ ಕಾಂಬೋಜ್ ಅವರು ಹಿಂದಿ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳ ಮೇಲೆ ಪ್ರಬಲ ಹಿಡಿತವನ್ನು ಹೊಂದಿದ್ದಾರೆ. ರುಚಿರಾ ಕಾಂಬೋಜ್ ಔಪಚಾರಿಕವಾಗಿ ಆಗಸ್ಟ್ 2, 2022 ರಂದು ನ್ಯೂಯಾರ್ಕ್ಗೆ ಭಾರತದ ಖಾಯಂ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. * UNESCO ಪ್ಯಾರಿಸ್ಗೆ ಭಾರತದ ಖಾಯಂ ಪ್ರತಿನಿಧಿ ಸ್ಥಾನಗಳನ್ನು ಹೊಂದಿದ್ದಾರೆ, ದಕ್ಷಿಣ ಆಫ್ರಿಕಾಕ್ಕೆ ಭಾರತದ ಹೈಕಮಿಷನರ್ ಆಗಿ ಹಾಗೂ ಭೂತಾನ್ಗೆ ಮೊದಲ ಮಹಿಳಾ ಭಾರತೀಯ ರಾಯಭಾರಿಯಾಗಿದ್ದರು. * ರುಚಿರಾ ಕಾಂಬೋಜ್ ಅವರು 2002-2005 ರಿಂದ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್ನಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.* ರುಚಿರಾ ಕಾಂಬೋಜ್ ಅವರು 1987ರ ಬ್ಯಾಚ್ ಅಧಿಕಾರಿ 1989-91ರಲ್ಲಿ ಫ್ರಾನ್ಸ್ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಕಾರ್ಯದರ್ಶಿ ತಮ್ಮ ರಾಜತಾಂತ್ರಿಕ ಸೇವೆಯನ್ನು ಆರಂಭಿಸಿದ್ದರು.ಯುರೋಪ್, ಮಾರಿಷಸ್, ಪೋರ್ಟ್ ಲೂಯಿಸ್ನಲ್ಲಿಯೂ ಕಾರ್ಯದರ್ಶಿಯಾಗಿ ರುಚಿರಾ ಕಾಂಬೋಜ್ ಸೇವೆ ಸಲ್ಲಿಸಿದ್ದಾರೆ.