* ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ತಂತ್ರಜ್ಞಾನ ಪರಿಚಯಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ತನ್ನ ಪ್ರಥಮ ಕಾರ್ಯತಂತ್ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ.* ತಂತ್ರಜ್ಞಾನ ಮತ್ತು ನಾವೀನ್ಯತೆಯ ಅನುಸರಣೆ ಎಲ್ಲಾ ಕ್ಷೇತ್ರಗಳಲ್ಲಿ ಅಗತ್ಯವೆಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದ್ದು, ಇದರ ಭಾಗವಾಗಿ ಕ್ವಾಂಟಮ್ ಕ್ಷೇತ್ರದಲ್ಲೂ ಹೊಸ ತಂತ್ರಜ್ಞಾನ ಅಳವಡಿಸುವ ಗುರಿಯನ್ನು ಹೊಂದಿದೆ.* “ಭಾರತವು ಕಾಂಟಮ್ ಹಾರ್ಡ್ವೇರ್ನಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಬೇಕು. ಆಮದು ಮೇಲಿನ ಅವಲಂಬನೆಯನ್ನ ಕಡಿಮೆ ಮಾಡುವಲ್ಲಿ ಇದು ಪ್ರಮುಖವಾಗುತ್ತದೆ.* ಸ್ಟಾರ್ಟಪ್ಗಳಿಗೆ ಬೆಂಬಲ ನೀಡುವ ಮೂಲಕ ಆತ್ಮನಿರ್ಭರತೆಯನ್ನು ಸಾಧಿಸಬಹುದು” ಎಂದು ಪ್ರೊ. ಅಜಯ್ ಕುಮಾರ್ ಹೇಳಿದ್ದಾರೆ.* “ಜಾಗತಿಕ ಮಟ್ಟದಲ್ಲಿ ಕ್ವಾಂಟಮ್ ತಂತ್ರಜ್ಞಾನ ಮಾನದಂಡಗಳನ್ನು ರೂಪಿಸಲು ನಾವು ಮುಂದಾಗಬೇಕು. ಈ ಮಾನದಂಡಗಳನ್ನು ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಇದು ಭಾರತಕ್ಕೆ ಅನುಕೂಲಕರವಾಗುತ್ತದೆ” ಎಂಬುದಾಗಿ ಅವರು ತಿಳಿಸಿದ್ದಾರೆ.* ಕೇಂದ್ರ ಸರ್ಕಾರದ 'ರಾಷ್ಟ್ರೀಯ ಕ್ವಾಂಟಮ್ ಮಿಷನ್' ಯೋಜನೆಯನ್ನು ಈಗಾಗಲೇ 17 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳುತ್ತಿದ್ದು, ಇದು ತಂತ್ರಜ್ಞಾನ ಪರಿವರ್ತನೆ ಮತ್ತು ನೂತನ ವ್ಯವಸ್ಥೆಗಳ ಪರಿಚಯಕ್ಕೆ ದಾರಿಯಾಗಿದೆ.