* ಕರ್ನಾಟಕದ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಭಾರತದ ಮೊದಲ ಖಾಸಗಿ ತಂತ್ರದ ಪೆಟ್ರೋಲಿಯಂ ನಿಕ್ಷೇಪ (SPR) ನಿರ್ಮಾಣವಾಗುತ್ತಿದೆ.* ಒಟ್ಟು 39 ಮಿಲಿಯನ್ ಬ್ಯಾರೆಲ್ ಸಾಮರ್ಥ್ಯ ಹೊಂದಿರುವ ಈ ನಿಕ್ಷೇಪವು ದೇಶದ ಇಂಧನ ಭದ್ರತೆಯನ್ನು ಬಲಪಡಿಸಲಿದೆ.* ಪ್ರಸ್ತುತ ಚೀನಾದಲ್ಲಿ 1,200 ಮಿಲಿಯನ್ ಬ್ಯಾರೆಲ್ ಹಾಗೂ ಅಮೆರಿಕದಲ್ಲಿ 727 ಮಿಲಿಯನ್ ಬ್ಯಾರೆಲ್ ಸಾಮರ್ಥ್ಯದ ತೈಲ ನಿಕ್ಷೇಪಗಳಿವೆ.* ಭಾರತದಲ್ಲಿ ಈಗಿರುವ SPR ಸಾಮರ್ಥ್ಯ ಕೇವಲ 5.33 ಮಿಲಿಯನ್ ಮೆಟ್ರಿಕ್ ಟನ್, ಇದು 8–9 ದಿನಗಳ ಬೇಡಿಕೆಯನ್ನು ಮಾತ್ರ ಪೂರೈಸುತ್ತದೆ.* ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿಗೆ ಈ ಯೋಜನೆ ಕಾರ್ಯಾನ್ವಯಗೊಳಿಸಲು ಆದೇಶಿಸಲಾಗಿದೆ.* 5,700 ಕೋಟಿ ವೆಚ್ಚದಲ್ಲಿ ನಿರ್ಮಾಣ ನಡೆಯಲಿದ್ದು, ತೈಲ ತುಂಬಲು ಪ್ರಸ್ತುತ ಬೆಲೆಯಲ್ಲಿ ಸುಮಾರು ₹11,020 ಕೋಟಿ ಅಗತ್ಯವಿದೆ. ಐದು ವರ್ಷಗಳ ಅವಧಿಗೆ ಈ SPR ನಿರ್ವಹಣೆ ಕಂಪನಿಗೆ ನೀಡಲಾಗಿದೆ.* ಈ SPR ಭಾರತದಲ್ಲಿನ ಇತರ ISPRL ನಿರ್ವಹಣೆಯ ನಿಕ್ಷೇಪಗಳಿಗೆ ಪೂರಕವಾಗಲಿದೆ. ಪೈಪ್ಲೈನ್ಗಳು, ಲೋಡಿಂಗ್ ಕೇಂದ್ರಗಳು ಮತ್ತು ಭೂಮಿ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದ್ದು ಶೀಘ್ರವೇ ಒಪ್ಪಂದಗಳು ಅಂತಿಮಗೊಳ್ಳಲಿವೆ.* 2018ರಲ್ಲಿ ಕೇಂದ್ರ ಸರ್ಕಾರ ಪಾದೂರು ಮತ್ತು ಒಡಿಶಾದ ಚಂಡಿಖೋಲ್ನಲ್ಲಿ ಪಿಪಿಪಿ ಮಾದರಿಯ ನಿಕ್ಷೇಪಗಳನ್ನು ಅನುಮೋದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.