* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(IIT-M) ಭಾರತದ ಮೊದಲ ಸ್ವದೇಶಿ 155 ಸ್ಮಾರ್ಟ್ ಮದ್ದುಗುಂಡುಗಳನ್ನು ತಯಾರಿಸಲಿದೆ.* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಸಂಸ್ಥೆಯು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಜೊತೆ ಪಾಲುದಾರಿಕೆಯಲ್ಲಿ ಮದ್ದುಗುಂಡುಗಳನ್ನು ತಯಾರಿಸಲಿದೆ. ಮ್ಯೂನಿಷನ್ಸ್ ಇಂಡಿಯಾ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುತ್ತದೆ.* ಪ್ರಸ್ತುತ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮದ್ದುಗುಂಡುಗಳು ಸಿಇಪಿ 500 ಮೀ. ಟರ್ಮಿನಲ್ ಇಂಪ್ಯಾಕ್ಟ್ ಪಾಯಿಂಟ್‌ನಲ್ಲಿ ಮಾರಣಾಂತಿಕತೆಯನ್ನು ಹೆಚ್ಚಿಸುವುದು ಗುರಿಯಾಗಿದೆ ಎಂದು ಐಐಟಿ-ಎಂ ಫೆಬ್ರುವರಿ 05 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.* ಈ ಯೋಜನೆಯ ಕುರಿತು ಮ್ಯೂನಿಷನ್ಸ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಅವರು 'ಆತ್ಮನಿರ್ಭರ ಭಾರತ್' ಗುರಿಯನ್ನು ಸಾಧಿಸುವಲ್ಲಿ ಇದು ದೇಶಕ್ಕೆ ದೈತ್ಯ ಪ್ರಗತಿಯಾಗಲಿದೆ ಎಂದು ತಿಳಿಸಿದರು.* ಐಐಟಿ ಮದ್ರಾಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ರಾಜೇಶ್ ಅವರು ಮತ್ತು ಅವರ ಸಂಶೋಧಕರ ತಂಡವು ಸ್ಮಾರ್ಟ್ ಮದ್ದುಗುಂಡುಗಳನ್ನು ಅಭಿವೃದ್ಧಿಪಡಿಸಲಿದ್ದು, ಎರಡು ವರ್ಷಗಳ ಅವಧಿಯನ್ನು ಹೊಂದಿದೆ.