* ಭಾರತದ ಮೊದಲ ಮೇಕ್ ಇನ್ ಇಂಡಿಯಾದ ಒಂದು ಮೆಗಾ ವ್ಯಾಟ್ ಹಸಿರು ಹೈಡ್ರೋಜನ್ ಸ್ಥಾವರವನ್ನು ಗುಜರಾತನ ಕಾಂಡ್ಲಾದ ದೀನದಯಾಳ್ ಉಪಾಧ್ಯಾಯ ಬಂದರಿನಲ್ಲಿ ಸ್ಥಾಪಿಸಲಾಗಿದೆ.* ದೀನದಯಾಳ್ ಬಂದರು ಪ್ರಾಧಿಕಾರ (DPA) ಅಧಿಕೃತವಾಗಿ 1 ಮೆಗಾವ್ಯಾಟ್ (MW) ಹಸಿರು ಹೈಡ್ರೋಜನ್ ಸೌಲಭ್ಯವನ್ನು ಪ್ರಾರಂಭಿಸಿತು, ಇದು ಭಾರತದ ಇಂಧನ ಪರಿವರ್ತನೆಯಲ್ಲಿ ಪ್ರಮುಖ ಮೈಲಿಗಲ್ಲು. * 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿಯಲ್ಲಿ ನಿರ್ಮಿಸಲಾದ ಈ ಸ್ಥಾವರವು ದೇಶದಲ್ಲಿ ಇದೇ ರೀತಿಯ ಮೊದಲನೆಯದು ಮತ್ತು ಸ್ವದೇಶಿ ಹಸಿರು ಇಂಧನ ತಂತ್ರಜ್ಞಾನಗಳನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.* ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಈ ಸ್ಥಾವರ ವಾರ್ಷಿಕ 140 ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.* ಈ ವರ್ಷದ ಅಂತ್ಯಕ್ಕೆ 5 MW ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು 2026ರ ವೇಳೆಗೆ 10 MW ಸಾಮರ್ಥ್ಯಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದೆ.* ಹಸಿರು ಹೈಡ್ರೋಜನ್ ಎಂದರೆ : ಸೌರಶಕ್ತಿ ಮತ್ತು ಗಾಳಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ತನ್ನು ಬಳಸಿ ನೀರನ್ನು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸುವ ಪ್ರಕ್ರಿಯೆಯಾಗಿದೆ.* ಇದರೊಂದಿಗೆ ಕಾಂಡ್ಲಾ ಮೆಗಾವ್ಯಾಟ್-ಪ್ರಮಾಣದ ಸ್ಥಳೀಯ ಹಸಿರು ಹೈಡ್ರೋಜನ್ ಸೌಲಭ್ಯವನ್ನು ಹೊಂದಿರುವ ಮೊದಲ ಭಾರತೀಯ ಬಂದರು ಆಗುತ್ತಿದೆ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಮೂಲಸೌಕರ್ಯದಲ್ಲಿ ಗುಜರಾತ್ನ ಬೆಳೆಯುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ.* ಕೇವಲ ನಾಲ್ಕು ತಿಂಗಳಲ್ಲಿ ನಿರ್ಮಿಸಲಾದ ಈ ಪ್ಲಾಂಟ್, ಮೇ 2025 ರಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಘೋಷಿಸಿದ 10 ಮೆಗಾವ್ಯಾಟ್ ಹಸಿರು ಹೈಡ್ರೋಜನ್ ಯೋಜನೆಯ ಮೊದಲ ಮಾಡ್ಯೂಲ್ ಆಗಿದೆ. * ವಾರ್ಷಿಕ 140 ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯದೊಂದಿಗೆ, ಈ ಪ್ಲಾಂಟ್ ಭಾರತದ ನಿವ್ವಳ ಶೂನ್ಯ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು ಎಂದು ಗುರುತಿಸುತ್ತದೆ. ದೀನದಯಾಳ್ ಬಂದರು ಮೆಗಾವ್ಯಾಟ್-ಪ್ರಮಾಣದ ಹಸಿರು ಹೈಡ್ರೋಜನ್ ಪ್ಲಾಂಟ್ ಅನ್ನು ಕಾರ್ಯಗತಗೊಳಿಸಿದ ಮೊದಲ ಭಾರತೀಯ ಬಂದರು.