Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತದ ಮೆಟ್ರೋ ಮಾರ್ಗ ವಿಸ್ತರಣೆ: ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನ
1 ನವೆಂಬರ್ 2025
* ಭಾರತದಲ್ಲಿ ನಗರ ಸಾರಿಗೆ ವ್ಯವಸ್ಥೆಯಲ್ಲಿ ಕಳೆದ ದಶಕದಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದೆ. ವಿಶೇಷವಾಗಿ ದೇಶದ ಪ್ರಮುಖ ಮಹಾನಗರಗಳಲ್ಲಿ ಟ್ರಾಫಿಕ್ ತೊಂದರೆ, ವಾಯು ಮಾಲಿನ್ಯ, ಸಮಯ ವ್ಯಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸಲು
ಮೆಟ್ರೋ ರೈಲು ಸೇವೆ
ಅತ್ಯುತ್ತಮ ಪರ್ಯಾಯವಾಗಿ ಉಭಯ ಸರ್ಕಾರಗಳ ಸಹಕಾರದಿಂದ ತ್ವರಿತವಾಗಿ ವಿಸ್ತಾರಗೊಳ್ಳುತ್ತಿದೆ.
* ಭಾರತವು ಈಗ
ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಮೆಟ್ರೋ ಜಾಲ
ಹೊಂದಿದ ರಾಷ್ಟ್ರವಾಗಿದೆ. ಈ ಸ್ಥಾನಕ್ಕೆ ಏರಲು ದೇಶದ ನಗರ ಅಭಿವೃದ್ಧಿ ಮತ್ತು ‘ಸ್ಮಾರ್ಟ್ ಸಿಟಿ’ ನೀತಿಗಳು ಮಹತ್ತರ ಪಾತ್ರವಹಿಸಿವೆ.
* ಪ್ರಪಂಚದಲ್ಲಿಯೇ ಮೆಟ್ರೋ ಜಾಲ ವ್ಯವಸ್ಥೆಯಲ್ಲಿ
ಭಾರತವೇ 3 ನೇ ಅತಿ ದೊಡ್ಡ ಜಾಲವಾಗಿದೆ.
ಮೊದಲನೇ ಸ್ಥಾನ ದಲ್ಲಿ ಚೀನಾ ಮತ್ತು 2 ನೇ ಸ್ಥಾನದಲ್ಲಿ ಅಮೆರಿಕಾ ವಿರಾಜಮಾನವಾಗಿ ಹೊರಹೊಮ್ಮಿವೆ.
* ಕರ್ನಾಟಕದಲ್ಲಿ ದೆಹಲಿಯ ನಂತರ
ಅತಿ ದೊಡ್ಡ ಮೆಟ್ರೋ ಜಾಲ ಬೆಂಗಳೂರಿನಲ್ಲಿ
ನಿರ್ಮಾಣವಾಗಿದೆ. ಈ ಬೆಂಗಳೂರಿನ ನಮ್ಮ ಮೆಟ್ರೋ ಜಾಲ
ಇಡೀ ದೇಶದಲ್ಲೇ 2 ನೇ ಅತಿ
ದೊಡ್ಡ ಸಂಪರ್ಕ ಜಾಲ
ವಾಗಿ ಹೊರಹೊಮ್ಮಿದೆ.
* ಭಾರತದಲ್ಲಿ ಈಗ 1,000 ಕಿಮೀ ಗಿಂತಲೂ ಹೆಚ್ಚು ಮೆಟ್ರೋ ರೈಲು ಮಾರ್ಗ ಕಾರ್ಯ ನಿರ್ವಹಿಸುತ್ತಿದೆ.ಈಗ 23ಕ್ಕೂ ಹೆಚ್ಚು ನಗರಗಳು ಮೆಟ್ರೋ ಸೇವೆಯನ್ನು ಬಳಸುತ್ತಿವೆ.ಮೆಟ್ರೋ ಯೋಜನೆಗಳು 11ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾರ್ಯಗತವಾಗಿವೆ.ದೇಶದಲ್ಲಿ ಸುಮಾರು 1.5 ಕೋಟಿ ಮಂದಿ ದಿನನಿತ್ಯ ಮೆಟ್ರೋ ಸೇವೆಯನ್ನು ಬಳಸುತ್ತಿದ್ದಾರೆ.
🏙️
ಮುಖ್ಯ ಮೆಟ್ರೋ ನಗರಗಳು:
# ದೆಹಲಿ ಮೆಟ್ರೋ
# ಬೆಂಗಳೂರು (ನಮ್ಮ ಮೆಟ್ರೋ)
# ಮುಂಬೈ ಮೆಟ್ರೋ
# ಹೈದರಾಬಾದ್ ಮೆಟ್ರೋ
# ಚೆನ್ನೈ ಮೆಟ್ರೋ
# ಅಹಮದಾಬಾದ್, ಪುಣೆ, ನಾಗ್ಪುರ, ಕೋಚಿ, ಲಕ್ನೋ ಮೊದಲಾದ ನಗರಗಳು.
🌏
ಮೆಟ್ರೋ ಜಾಲದ ವಿಶ್ವ ಕ್ರಮಾಂಕ (Metro Network Length)ಗಳು
:ಚೀನಾ,ರಷ್ಯಾ,ಭಾರತ,ಜಪಾನ,ದಕ್ಷಿಣಕೋರಿಯಾ.
ಮೆಟ್ರೋ ಜಾಲದಿಂದ ಸರಕಾರ ಕೈಗೊಳ್ಳುವ ಮುಂದಿನ ಗುರಿಗಳು:
> 2030ರೊಳಗೆ 2,500 ಕಿಮೀ ಮೆಟ್ರೋ ಜಾಲ ಗುರಿ
> ಟಿಯರ್–2 ನಗರಗಳಲ್ಲೂ ಮೆಟ್ರೋ ಯೋಜನೆ ವಿಸ್ತರಣೆ
> ಮೆಟ್ರೋ ಲೈಟ್ ಮತ್ತು ಮೆಟ್ರೋ ನೀಯೊ ತಂತ್ರಜ್ಞಾನ ಬಳಸುವುದು
🌱
ಮೆಟ್ರೋ ಜಾಲದಿಂದ ಪರಿಸರದ ಮೇಲೆ ಬೀರುವ ಪರಿಣಾಮಗಳು:
= CO₂ ಉಳಿತಾಯ
= ಪೆಟ್ರೋಲ್/ಡೀಸೆಲ್ ಅವಲಂಬನೆ ಕುಗ್ಗಿಸುವುದು
= ನಗರಗಳಲ್ಲಿ ಗ್ರೀನ್ ಮೊಬಿಲಿಟಿ ಉತ್ತೇಜನ
* ಭಾರತದ “
ಮೆಟ್ರೋ ಕ್ರಾಂತಿ”
ನಗರ ಸಾರಿಗೆಯ ಭವಿಷ್ಯವನ್ನು ರೂಪಿಸುತ್ತಿದ್ದು, ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಗೆ ಶುದ್ಧ, ವೇಗದ, ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಲ್ಲಿ ಮಹತ್ತರ ಹೆಜ್ಜೆಯಾಗಿದೆ.
Take Quiz
Loading...