* ಭಾರತ ಸರ್ಕಾರವು ತನ್ನ ಕರಾವಳಿಯ ಉದ್ದವನ್ನು 7,516.6 ಕಿ.ಮೀ.ಯಿಂದ 11,098.8 ಕಿ.ಮೀ.ಗೆ ಪರಿಷ್ಕರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.* ಈ ಪರಿಷ್ಕರಣೆ ಯಾವುದೇ ಹೆಚ್ಚುವರಿ ಭೂಮಿಯನ್ನು ಸೇರ್ಪಡೆಯಾಗದೆ, ಸುಧಾರಿತ ಮ್ಯಾಪಿಂಗ್ ತಂತ್ರಜ್ಞಾನಗಳ ಬಳಕೆಯಿಂದ ಸಾಧ್ಯವಾಗಿದೆ.* ಈ ನವೀಕರಣವು ಭಾರತೀಯ ಭೌಗೋಳಿಕ ಅಧ್ಯಯನದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಕರಾವಳಿ ಭದ್ರತೆ, ಹವಾಮಾನ ಅನಾಲಿಸಿಸ್, ಸಮುದ್ರ ಆಧಾರಿತ ಆರ್ಥಿಕತೆಯ ಯೋಜನೆಗಳಿಗೆ ಸಹಾಯ ಮಾಡುವ ನಿರ್ಧಾರವಾಗಿದೆ.* ಡಿಸೆಂಬರ್ 2024ರಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಪರಿಷ್ಕರಣೆಗೆ ಆದೇಶ ನೀಡಿತ್ತು. ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಿದ ತಂತ್ರಜ್ಞಾನದ ಸಹಾಯದಿಂದ ಗಡಿಗಳ ಅಳತೆಯನ್ನು ಪರಿಶೀಲಿಸಲಾಗುತ್ತದೆ. ಈ ಸಂಶೋಧನೆಗಳನ್ನು ಸರ್ವೇ ಆಫ್ ಇಂಡಿಯಾ ಮತ್ತು ನ್ಯಾಷನಲ್ ಹೈಡ್ರೋಗ್ರಾಫಿಕ್ ಇಲಾಖೆ ಸಂಯುಕ್ತವಾಗಿ ನಡೆಸಿವೆ.