* ಕಳೆದ 10 ವರ್ಷಗಳಲ್ಲಿ ಭಾರತದ ಹಾಲು ಉತ್ಪಾದನೆ ಶೇ. 63.56ರಷ್ಟು ಹೆಚ್ಚಾಗಿದೆ. 2014-15ರಲ್ಲಿ 146.3 ಮಿಲಿಯನ್ ಟನ್ ಇದ್ದ ಉತ್ಪಾದನೆ, 2023-24ರ ವೇಳೆಗೆ 239.2 ಮಿಲಿಯನ್ ಟನ್ಗೆ ತಲುಪಿದೆ.* ಹಾಲು ಉತ್ಪಾದನೆಯಲ್ಲಿ ವಾರ್ಷಿಕ ಶೇ. 5.7ರಷ್ಟು ಬೆಳವಣಿಗೆ ಕಂಡಿದ್ದು, ಜಾಗತಿಕ ಉತ್ಪಾದನೆ ಶೇ.2ರಷ್ಟು ಹೆಚ್ಚಳಗೊಂಡಿದೆ ಎಂದು ಕೇಂದ್ರ ಮೀನುಗಾರಿಕಾ ಮತ್ತು ಪಶುಸಂಗೋಪನಾ ಸಚಿವ ಎಸ್.ಪಿ.ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.* "ಕಳೆದ ದಶಕದಲ್ಲಿ ದೇಶದಲ್ಲಿ ಹಾಲಿನ ಲಭ್ಯತೆ ಶೇ. 48ರಷ್ಟು ಹೆಚ್ಚಳಗೊಂಡಿದೆ. ಭಾರತವು 1998ರಿಂದ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇ. 25ರಷ್ಟು ಪಾತ್ರವಹಿಸಿದೆ" ಎಂದು ಸಚಿವರು ತಿಳಿಸಿದ್ದಾರೆ.* ರಾಷ್ಟ್ರೀಯ ಡೈರಿ ಅಭಿವೃದ್ಧಿ ಕಾರ್ಯಕ್ರಮ: ರಾಜ್ಯ ಸರ್ಕಾರಗಳು ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ಮೂಲಸೌಕರ್ಯಕ್ಕೆ ಕೈಗೊಂಡ ಕ್ರಮಗಳಿಗೆ ಬೆಂಬಲವಾಗಿ, ಕೇಂದ್ರ ಸರ್ಕಾರವು ದೇಶವ್ಯಾಪಿಯಾಗಿ 'ರಾಷ್ಟ್ರೀಯ ಡೈರಿ ಅಭಿವೃದ್ಧಿ ಕಾರ್ಯಕ್ರಮ' (NPDD) ಜಾರಿಗೆ ತರುತ್ತಿದೆ.* "ಈ ಘಟಕವು ಗುಣಮಟ್ಟದ ಹಾಲು ಪರೀಕ್ಷಾ ಉಪಕರಣಗಳ ಮೂಲಸೌಕರ್ಯ ಒದಗಿಸುವುದರ ಜೊತೆಗೆ, ರಾಜ್ಯ ಡೈರಿ ವಲಯದ ಸಹಕಾರಿ ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಶೀತಲೀಕರಣ ಸೌಲಭ್ಯ ಒದಗಿಸಲಿದೆ."* 'ಸಹಕಾರಿ ಸಂಘಗಳ ಮೂಲಕ ಹೈನುಗಾರಿಕೆ' ಯೋಜನೆಯ 'ಬಿ' ಘಟಕವು ಸಂಘಟಿತ ಮಾರುಕಟ್ಟೆಗಳಲ್ಲಿ ರೈತರ ಹಿಸುಕವನ್ನು ಹೆಚ್ಚಿಸುವುದರೊಂದಿಗೆ, ಡೈರಿ ಸಂಸ್ಕರಣಾ ವ್ಯವಸ್ಥೆ ಮತ್ತು ಮಾರುಕಟ್ಟೆ ಮೂಲಸೌಕರ್ಯವನ್ನು ಸುಧಾರಿಸುತ್ತದೆ.* ಮಾರುಕಟ್ಟೆ ಅವ್ಯವಸ್ಥೆ ಅಥವಾ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬಿಕ್ಕಟ್ಟನ್ನು ಎದುರಿಸಲು, ಕೇಂದ್ರ ಸರ್ಕಾರವು ರಾಜ್ಯ ಡೈರಿ ಸಹಕಾರಿ ಒಕ್ಕೂಟಗಳಿಗೆ ಆರ್ಥಿಕ ಸಹಾಯ ಒದಗಿಸುತ್ತದೆ.