* ಭಾರತದ ಮಾನವ ಸಹಿತ ಬಾಹ್ಯಾಕಾಶ ಮಿಷನ್‌ ಗಗನಯಾನಕ್ಕೆ ಆಯ್ಕೆಯಾದ ನಾಲ್ಕು ಗಗನಯಾತ್ರಿಗಳಿಗೆ ವಿಂಗ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 27 ರಂದು ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದಾರೆ.* ಬಾಹ್ಯಾಕಾಶ ಮಿಷನ್‌ಗೆ ಆಯ್ಕೆಯಾಗಿರುವ ಗಗನಯಾತ್ರಿಗಳ ಹೆಸರುಗಳು ಇಂತಿವೆ- ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣ ನಾಯರ್, ಜಿಪಿ ಕ್ಯಾಪ್ಟನ್ ಅಜಿತ್ ಕೃಷ್ಣನ್, ಜಿಪಿ ಕ್ಯಾಪ್ಟನ್ ಅಂಗದ್ ಪ್ರತಾಪ್, ಹಾಗು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಗಗನ್‌ಯಾನ್ ಮಿಷನ್‌ಗೆ ಆಯ್ಕೆಯಾದ ಗಗನಯಾತ್ರಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ತಿಳಿಸಿದರು. * ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ವರಿಗೂ ‘ಗಗನಯಾತ್ರಿ ರೆಕ್ಕೆಗಳನ್ನು’ ಉಡುಗೊರೆಯಾಗಿ ನೀಡಿದರು.* ಇದೇ ವೇಳೆ ಪ್ರಧಾನಿ ಮೋದಿ ಅವರು ವಿಎಸ್‌ಎಸ್‌ಸಿಯಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’, ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಸೆಮಿ-ಕ್ರಯೋಜೆನಿಕ್ ಇಂಟಿಗ್ರೇಟೆಡ್ ಎಂಜಿನ್ ಘಟಕ ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್‌ಎಆರ್) ಪಿಎಸ್‌ಎಲ್‌ವಿ ಏಕೀಕರಣ ಘಟಕವನ್ನು ಉದ್ಘಾಟಿಸಿದರು.* ಮಾನವ ಬಾಹ್ಯಾಕಾಶ ಹಾರಾಟದ ಮಿಷನ್ ಮೂರು ಸದಸ್ಯರ ಸಿಬ್ಬಂದಿಯನ್ನು ಕಡಿಮೆ ಭೂಮಿಯ ಕಕ್ಷೆಗೆ ಉಡಾಯಿಸಲು ಮತ್ತು ಮೂರು ದಿನಗಳ ನಂತರ ಅವರನ್ನು ಮರಳಿ ತರಲು ಗುರಿಯನ್ನು ಹೊಂದಿದೆ. ಮಿಷನ್‌ಗಾಗಿ ಆಯ್ಕೆಯಾದ ಗಗನಯಾತ್ರಿಗಳಿಗೆ ತಾಂತ್ರಿಕ ಜ್ಞಾನ ಮತ್ತು ದೈಹಿಕ ಸಾಮರ್ಥ್ಯದ ಬಗ್ಗೆ ತರಬೇತಿ ನೀಡಲಾಗಿದೆ.* "ದೇಶವು ನಾಲ್ಕು ಗಗನ್ಯಾನ್ ಪ್ರಯಾಣಿಕರ ಬಗ್ಗೆ ತಿಳಿದುಕೊಂಡಿದೆ. ಇವರು ಕೇವಲ ನಾಲ್ಕು ಹೆಸರುಗಳು ಅಥವಾ ನಾಲ್ಕು ಜನರಲ್ಲ. ಈ ನಾಲ್ಕು ಶಕ್ತಿಗಳು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತವೆ" ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.* "ನಲವತ್ತು ವರ್ಷಗಳ ನಂತರ, ಒಬ್ಬ ಭಾರತೀಯ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾನೆ. ಆದರೆ ಈ ಬಾರಿ, ಸಮಯ, ಕೌಂಟ್‌ಡೌನ್ ಮತ್ತು ರಾಕೆಟ್ ನಮಗೆ ಸೇರಿದೆ" ಎಂದು ಅವರು ಹೇಳಿದರು. ಇದಕ್ಕೂ ಮೊದಲು, ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು (ನಿವೃತ್ತ) 1984 ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹೋಗಿದ್ದರು.* ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿರುವ ಸಮಯದಲ್ಲಿ, ಗಗನ್ಯಾನ್ ಮಿಷನ್ ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದರು.* ಗಗನಯಾನ ಯೋಜನೆಯು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ಆಗಿದ್ದು, 2024-25 ಈ ಸಾಲಿನಲ್ಲಿ ಅಡಾವಣೆಯಾಗುವ ನಿರೀಕ್ಷೆಯಿದ್ದು,, ಈ ಯೋಜನೆಯ ಮೂಲಕ ಇಸ್ರೋ ನಾಲ್ವರನ್ನು 400 ಕಿ.ಮೀ  ದೂರದ ಕಕ್ಷೆಗೆ ಕಲಿಸಲಿದ್ದು, ಮೂರೂ ದಿನಗಳಲ್ಲಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಯೋಜಿಸಿದೆ.* ನಾಲ್ಕು ಗಗನಯಾತ್ರಿಗಳು ಬೆಂಗಳೂರಿನ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎ ಎಫ್ ನ ಇನ್ ಸ್ಟಿಟ್ಯೂಟ್ ಅಫ್ ಏರೋ ಸ್ಪೇಸ್ ಮೆಡಿಸಿನ್ ನಲ್ಲಿ ನಡೆಯಿತು.* 2019ರ ಜೂನ್‌ನಲ್ಲಿ ಇಸ್ರೋ ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸೋಮೊಸ್‌ ಅಂಗಸಂಸ್ಥೆಯಾದ ಗ್ಲಾವೊಮೊಸ್ ನಾಲ್ವರು ಗಗನಯಾತ್ರಿಗಳ ತರಬೇತಿಗಾಗಿ ಒಪ್ಪಂದ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಗಗನಯಾತ್ರಿಗಳು ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ 2020ರ ಫೆಬ್ರವರಿಯಿಂದ 2021ರ ಮಾರ್ಚ್‌ವರೆಗೆ ತರಬೇತಿ ಪಡೆದಿದ್ದಾರೆ.