* ಕ್ರೋಲ್ಸ್ ಕನ್ಸಲ್ವೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರಿಟಿ ಆಗಿ ಹೊರಹೊಮ್ಮಿದ್ದಾರೆ.* ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ವಿರಾಟ್ ಕೊಹ್ಲಿಅವರು ಮರಳಿ ಅಗ್ರಸ್ಥಾನ ಪಡೆದಿದ್ದಾರೆ. ಈ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ.* 2020ನೇ ಸಾಲಿನಲ್ಲಿ ಕೊಹ್ಲಿ ಅವರ ಬ್ರಾಂಡ್ ಮೌಲ್ಯ ₹2,000 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಬ್ರಾಂಡ್ ಮೌಲ್ಯದಲ್ಲಿ ಕೊಂಚ ಇಳಿಕೆಯಾಗಿ ₹1,900 ಕೋತಿ ಆಗಿತ್ತು. 2022 ₹1,474 ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದರು ಕೊಹ್ಲಿ ಒಂದೇ ವರ್ಷದಲ್ಲಿ ಮೌಲ್ಯದಲ್ಲಿ ಶೇ 29ರಷ್ಟು ಜಿಗಿತ ಕಂಡಿ ದುಬಾರಿ ತಾರೆ ಎನಿಸಿಕೊಂಡಿದ್ದಾರೆ.*  ಬಾಲಿವುಡ್ ನಟ ಶಾರುಕ್ ಖಾನ್ ಅವರು 2022ರಲ್ಲಿ ₹464 ಕೋಟಿ ಬ್ರಾಂಡ್ ಮೌಲ್ಯ ಹೊಂದುವ ಮೂಲಕ 10ನೇ ಸ್ಥಾನದಲ್ಲಿದ್ದರು.  * ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿ1. ವಿರಾಟ್ ಕೊಹ್ಲಿ ಬ್ರಾಂಡ್ ಮೌಲ್ಯ ₹1900 ಕೋಟಿ 2. ರಣವೀರ್ ಸಿಂಗ್ ಬ್ರಾಂಡ್ ಮೌಲ್ಯ ₹1692 ಕೋಟಿ 3. ಶಾರುಕ್ ಖಾನ್ ಬ್ರಾಂಡ್ ಮೌಲ್ಯ ₹1,000 ಕೋಟಿ  4. ಅಕ್ಷಯ್ ಕುಮಾರ್ ಬ್ರಾಂಡ್ ಮೌಲ್ಯ ₹930 ಕೋಟಿ 5. ಆಲಿಯಾ ಭಟ್ ಬ್ರಾಂಡ್ ಮೌಲ್ಯ ₹842 ಕೋಟಿ 6. ದೀಪಿಕಾ ಪಡುಕೋಣೆ ಬ್ರಾಂಡ್ ಮೌಲ್ಯ ₹800 7. ಎಂ.ಎಸ್. ದೋನಿ ಬ್ರಾಂಡ್ ಮೌಲ್ಯ ₹798 ಕೋಟಿ 8. ಸಚಿನ್ ತೆಂಡೂಲ್ಕರ್ ಬ್ರಾಂಡ್ ಮೌಲ್ಯ ₹760 ಕೋಟಿ 10. ಸಲ್ಮಾನ್ ಖಾನ್ ಬ್ರಾಂಡ್ ಮೌಲ್ಯ ₹680 ಕೋಟಿ 12. ಕಿಯಾರ ಅಡ್ವಾಣಿ 12ನೇ ಸ್ಥಾನ 25. ಕತ್ರಿನಾ ಕೈಫ್ 25ನೇ ಸ್ಥಾನದಲ್ಲಿದ್ದಾರೆ.