* ಏಪ್ರಿಲ್ 21, 2025ರಂದು ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ MICTನಲ್ಲಿ ಕ್ರೂಸ್ ಕಾರ್ಯಾಚರಣೆಗಳು ಪ್ರಾರಂಭವಾಯಿತು.* ದಿನಕ್ಕೆ 10,000 ಪ್ರಯಾಣಿಕರು, ವರ್ಷಕ್ಕೆ 1 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಗುರಿಯಿದೆ.* ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರು ಉದ್ಘಾಟನೆ ನೆರವೇರಿಸಿದರು.* ಟರ್ಮಿನಲ್ನ್ನು ₹556 ಕೋಟಿ ವೆಚ್ಚದಲ್ಲಿ ಬಲ್ಲಾರ್ಡ್ ಪಿಯರ್ನಲ್ಲಿ ಅಭಿವೃದ್ಧಿಪಡಿಸಲಾಗಿದೆ.* MICTನಲ್ಲಿ 72 ಚೆಕ್-ಇನ್ ಮತ್ತು ವಲಸೆ ಕೌಂಟರ್ಗಳಿರುವ ಎರಡು ಮಹಡಿಗಳು, ಬೃಹತ್ ಹಡಗುಗಳ ನಿರ್ವಹಣೆ ಸಾಮರ್ಥ್ಯವಿದೆ. 300+ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ.* ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು 'ಕ್ರೂಸ್ ಭಾರತ್ ಮಿಷನ್'ಡಿ ಪ್ರಮುಖ ಹೆಜ್ಜೆಯಾಗಿದೆ.* ಈ ಸಮಾರಂಭದಲ್ಲಿ ವಧವನ್ ಬಂದರಿನಲ್ಲಿ ₹5,700 ಕೋಟಿ ಹೂಡಿಕೆಯ ಮೂಲಸೌಕರ್ಯ ಯೋಜನೆಗಳ ಒಪ್ಪಂದಗಳಿಗೂ ಸಹಿ ಹಾಕಲಾಯಿತು.