* ಭಾರತೀಯ ರಿಸರ್ವ್ ಬ್ಯಾಂಕ್(RBI) ಭಾರತದ ಹಣ ರವಾನೆ ಸಮೀಕ್ಷೆಯ(India's Remittances Survey 2023-24) ಆರನೇ ಸುತ್ತಿನ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ, * ಮಾರ್ಚ್ನಲ್ಲಿ ಆರ್ಬಿಐನ ನಡೆಸಿದ ಭಾರತದ ಹಣ ರವಾನೆ ಸಮೀಕ್ಷೆಯ ಒಳನೋಟಗಳು’ ಎಂಬ ಶೀರ್ಷಿಕೆಯ ಪ್ರಬಂಧವು ಭಾರತದ ಒಟ್ಟು ಹಣ ರವಾನೆ ದ್ವಿಗುಣಗೊಂಡಿದೆ ಎಂದು ಹೇಳಿದೆ.* ಈ ಸಮೀಕ್ಷೆಯ ಪ್ರಕಾರ ಈಗ ಯುಎಸ್ ಮತ್ತು ಯುಕೆ ದೇಶಗಳು ಭಾರತಕ್ಕೆ ಹಣಕಾಸು ವರ್ಗಾವಣೆ ಮಾಡುವ ಪ್ರಮುಖ ಮೂಲ ರಾಷ್ಟ್ರಗಳಾಗಿವೆ.* 2010-11ರಲ್ಲಿ $55.6 ಬಿಲಿಯನ್ ಆಗಿದ್ದ ಒಟ್ಟಾರೆ ಹಣಕಾಸು ವರ್ಗಾವಣೆಗಳು 2023-24ರಲ್ಲಿ $118.7 ಬಿಲಿಯನ್ಗೆ ಏರಿವೆ. 2029ರ ಹೊತ್ತಿಗೆ ಈ ಮೊತ್ತವು $160 ಬಿಲಿಯನ್ ತಲುಪಬಹುದು ಎಂದು ಆರ್ಬಿಐ ಅಂದಾಜಿಸಿದೆ.* ಅಮೆರಿಕಾ ಮತ್ತು ಯುಕೆ ದೇಶಗಳಿಂದ ಹಣಕಾಸು ವರ್ಗಾವಣೆ FY24ರಲ್ಲಿ 40%ಕ್ಕೆ ಏರಿದ್ದು, FY17ರಲ್ಲಿ ಇದು ಕೇವಲ 26% ಆಗಿತ್ತು.* ಯುಎಸ್ 2021ರಿಂದಲೇ ಪ್ರಮುಖ ಮೂಲ ರಾಷ್ಟ್ರವಾಗಿದ್ದು, FY24ರಲ್ಲಿ 28% ಹಣಕಾಸು ವರ್ಗಾವಣೆ ಮಾಡಿದೆ. ಸಿಂಗಪುರ್ ಮತ್ತು ಆಸ್ಟ್ರೇಲಿಯಾ ಕೂಡಾ ಪ್ರಮುಖ ಪಂಗಡದಲ್ಲಿ ಸೇರಿದ್ದು, ಯುಎಇ ಮತ್ತು ಸೌದಿ ಅರೇಬಿಯಾದಿಂದ ಹಣಕಾಸು ವರ್ಗಾವಣೆ ಶೇ.27% (FY17) ರಿಂದ ಶೇ.19.2% (FY24) ಮತ್ತು ಶೇ.11.6% ರಿಂದ ಶೇ.6.7% ಗೆ ಕುಸಿದಿದೆ.* ಒಟ್ಟಾರೆಯಾಗಿ, ಜಿಸಿಸಿ ರಾಷ್ಟ್ರಗಳಿಂದ ಹಣಕಾಸು ವರ್ಗಾವಣೆ 2016-17ರಲ್ಲಿ 47% ಇತ್ತು, ಆದರೆ 2023-24ರಲ್ಲಿ ಅದು 38% ಆಗಿದೆ.* ಈ ಸಮೀಕ್ಷೆ ವಲಸೆ ಪ್ರವೃತ್ತಿಯಲ್ಲಿನ ಬದಲಾವಣೆಯನ್ನು ಬಹಿರಂಗಪಡಿಸಿದೆ. ಹೆಚ್ಚು ನುರಿತ ವೃತ್ತಿಪರರು ವಲಸೆ ಹೋಗುತ್ತಿದ್ದಾರೆ, ಇದು ಮುಂದುವರಿದ ಆರ್ಥಿಕತೆಗಳಿಂದ ಹಣ ರವಾನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ಗಲ್ಫ್ ರಾಷ್ಟ್ರಗಳಿಂದ ಬರುವ ಒಳಹರಿವನ್ನು ಮೀರಿಸುತ್ತದೆ.