* ಎಸ್ಬಿಐನ ಇತ್ತೀಚಿನ ವರದಿಯ ಪ್ರಕಾರ, ಸರ್ಕಾರದ ಕ್ರಮಗಳಿಂದ ಭಾರತದಲ್ಲಿ ಅರಣ್ಯ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆ.* ಇದರ ಪರಿಣಾಮವಾಗಿ ಭಾರತ ಹೆಚ್ಚು ಅರಣ್ಯ ಹೊಂದಿರುವ ಹತ್ತು ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆದಿದೆ.* ನಗರೀಕರಣದ ನಡುವೆಯೂ ನಗರ ಹಸಿರೀಕರಣ ಮತ್ತು ಭೂ-ಬಳಕೆ ಯೋಜನೆಗಳಿಂದಾಗಿ ಈ ಏರಿಕೆ ಸಂಭವಿಸಿದೆ.* ಪ್ರಸ್ತುತ ಭಾರತದಲ್ಲಿನ ಮಹಾನಗರಗಳಲ್ಲಿ 511.81 ಕಿ.ಮೀ ಅರಣ್ಯವಿದ್ದು, ಇದು ಶೇ.10.26ರಷ್ಟು ಪ್ರದೇಶವನ್ನೊಳಗೊಂಡಿದೆ. ದಿಲ್ಲಿ ಅತಿಹೆಚ್ಚು ಅರಣ್ಯ ಹೊಂದಿದ್ದರೆ, ಮುಂಬಯಿ ಹಾಗೂ ಬೆಂಗಳೂರು ನಂತರ ಸ್ಥಾನದಲ್ಲಿವೆ.* ಅಹಮದಾಬಾದ್ನಲ್ಲಿ 2021ರಿಂದ 2023ರವರೆಗೆ ಅರಣ್ಯ ವ್ಯಾಪ್ತಿಯಲ್ಲಿ ಗರಿಷ್ಠ ಏರಿಕೆ ಕಂಡುಬಂದಿದೆ.* ಅರಣ್ಯ ವಲಯದ ಈ ಬೆಳವಣಿಗೆ ಕಾಗದ ತಯಾರಿ ಮತ್ತು ಪೀಠೋಪಕರಣ ಕೈಗಾರಿಕೆಗಳಿಗೆ ಬೆಂಬಲ ನೀಡುತ್ತಿದೆ. ಒಡಿಶಾ, ಮಿಜೋರಾಂ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ಹೆಚ್ಚಾಗುತ್ತಿದೆ.* ಆದರೆ ಯುಪಿ, ಬಿಹಾರ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿ ಶೇ.10ಕ್ಕಿಂತ ಕಡಿಮೆ ಇದೆ.* ಶಹರೀ ಜನಸಂಖ್ಯೆ ಏರಿಕೆಯಿಂದ ಅರಣ್ಯ ವ್ಯಾಪ್ತಿಯ ಮೇಲೂ ಪ್ರಭಾವ ಬೀರುತ್ತಿದ್ದು, ಸ್ಮಾರ್ಟ್ ಸಿಟೀಸ್ ಮತ್ತು ಅಟಲ್ ಮಿಷನ್ ಯೋಜನೆಗಳಂತಹ ಹಸಿರು ಮೂಲಸೌಕರ್ಯ ಯೋಜನೆಗಳು ಅಗತ್ಯವೆಂದು ವರದಿ ಸೂಚಿಸಿದೆ.