* ವಿಶ್ವದ ಹೆಚ್ಚಿನ ಅರ್ಥಶಾಸ್ತ್ರಜ್ಞರು 2025ರಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ದುರ್ಬಲವಾಗುವ ನಿರೀಕ್ಷಿಸಿದ್ದರೂ, ಭಾರತ ಮಾತ್ರ ತನ್ನ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರ್ಥಿಕ ವರದಿ ತಿಳಿಸಿದೆ.* "2025ರಲ್ಲಿ ಜಾಗತಿಕ ಆರ್ಥಿಕತೆಯು ಪ್ರಮುಖ ಸವಾಲುಗಳನ್ನು ಎದುರಿಸಲಿದೆ. ಪರಿಸ್ಥಿತಿ ಆಶಾದಾಯಕವಾಗಿಲ್ಲ" ಎಂದು ಜಾಗತಿಕ ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 56ರಷ್ಟು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.* ಅರ್ಥತಜ್ಞರಲ್ಲಿ 17% ಜನರು ಚೇತರಿಕೆಯನ್ನು ನಿರೀಕ್ಷಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ವಿತ್ತ ನೀತಿಗಳ ಪರಿಷ್ಕರಣೆಯ ಅಗತ್ಯವಿರುವುದಾಗಿ ಸಲಹೆ ನೀಡಿದ್ದಾರೆ.* ಅಮೆರಿಕ ಮತ್ತು ಭಾರತಗಳಲ್ಲಿ 2025ರಲ್ಲಿ ಆರ್ಥಿಕ ಪ್ರಗತಿಯ ಶಕ್ತಿಯುತವಾಗಿರುತ್ತವೆ. ಭಾರತದ ಆರ್ಥಿಕತೆ ಇಡೀ ವಿಶ್ವದಲ್ಲೇ ತುಂಬ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಈ ಗತಿಯನ್ನು ಭಾರತ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.* 2024ರ ಮೂರನೇ ತ್ರೈಮಾಸಿಕ ವರದಿಯಲ್ಲಿ ರಾಷ್ಟ್ರೀಯ ಸಾಂಖ್ಯಿಕ ದತ್ತಾಂಶ ಇಲಾಖೆ ಭಾರತದ ಜಿಡಿಪಿ ಶೇ. 5.4 ಎಂದು ಘೋಷಿಸಿತು, ಇದು ಕಳೆದ ಎರಡು ವರ್ಷಗಳ ಕನಿಷ್ಠ ಮಟ್ಟವಾಗಿದೆ. ಆದರೆ, ವಿಶ್ವ ಆರ್ಥಿಕ ವೇದಿಕೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ಸಾಕಾರಾತ್ಮಕ ನೋಟ ವ್ಯಕ್ತಪಡಿಸಿದೆ.* ಚೀನಾ, ಐರೋಪ್ಯ - ಒಕ್ಕೂಟದಲ್ಲಿ ದುರ್ಬಲ ಪರಿಸ್ಥಿತಿಯೇ ಮುಂದುವರಿಯಲಿದೆ ಎಂದು ವಿಶ್ವ ಆರ್ಥಿಕ ವೇದಿಕೆ ವರದಿ ಅಂದಾಜಿಸಿದೆ.