* ಭಾರತವು ಇತ್ತೀಚೆಗೆ 100 ದೇಶಿಯ ಡೀಪ್-ಟೆಕ್ಸ್ (100DesiDeepTechs) ಹೆಸರಿನಲ್ಲಿ ಹೊಸ ಯೋಜನೆ ಆರಂಭಗೊಂಡಿದ್ದು, ದೇಶದ ಪ್ರಮುಖ 100 ಡೀಪ್-ಟೆಕ್ ಸ್ಟಾರ್ಟ್ಅಪ್ಗಳನ್ನು ಗುರುತಿಸಿ ಬೆಂಬಲಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ.* ಈ ಬಹುಪಾಲುದಾರರ ಯೋಜನೆಯು ಸ್ಟಾರ್ಟ್ಅಪ್ ಪಾಲಿಸಿ ಫೋರಂ (SPF), ಸ್ಟಾರ್ಟ್ಅಪ್ ಇಂಡಿಯಾ, ಐಐಟಿ ಮದ್ರಾಸ್ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತದೆ.* ಡೀಪ್-ಟೆಕ್ ಸ್ಟಾರ್ಟ್ಅಪ್ಗಳಿಗೆ ದೃಢ ನೀತಿ ವ್ಯವಸ್ಥೆ ಒದಗಿಸಲು, ಈ ಯೋಜನೆ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಹೂಡಿಕೆದಾರರು ಹಾಗೂ ಉದ್ಯಮ ನಾಯಕರನ್ನು ಒಟ್ಟುಗೂಡಿಸುತ್ತದೆ. ನಾವೀನ್ಯತೆ, ಸಂಶೋಧನೆ ಹಾಗೂ ಅಭಿವೃದ್ಧಿಗೆ ಸರ್ಕಾರದಿಂದ ನಿರ್ದಿಷ್ಟ ಯೋಜನೆಗಳ ಮೂಲಕ ಬೆಂಬಲ ಸಿಗಲಿದೆ.\* ಆಗಸ್ಟ್ ಮಧ್ಯದವರೆಗೆ ಭಾರತದೆಲ್ಲೆಡೆಗಿನ ಸ್ಟಾರ್ಟ್ಅಪ್ಗಳು ಅರ್ಜಿ ಸಲ್ಲಿಸಬಹುದು. ಆಯ್ದ ಕಂಪನಿಗಳೊಂದಿಗೆ ನೀತಿ ರೂಪಕರು, ಹೂಡಿಕೆದಾರರು, ನಿಯಂತ್ರಕರು ಸಂವಾದ ನಡೆಸಲಿದ್ದಾರೆ. ಈ ಸಂವಾದಗಳ ಆಧಾರದಲ್ಲಿ ಸಮಗ್ರ ನೀತಿ ಶ್ವೇತಪತ್ರವನ್ನು ರೂಪಿಸಲಾಗುವುದು.* ಸಂವಾದಗಳಿಂದ ರೂಪುಗೊಳ್ಳುವ ನೀತಿಯ ಶ್ವೇತಪತ್ರವನ್ನು ಡೀಪ್ಟೆಕ್ ಬೈಠಕ್ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಡೀಪ್ಟೆಕ್ ನೀತಿ ಸಂಶೋಧನಾ ಕೇಂದ್ರ (CDPR) ಪ್ರಾರಂಭವಾಗಲಿದೆ.* ಸೆಮಿಕಂಡಕ್ಟರ್, ರಕ್ಷಣಾ ತಂತ್ರಜ್ಞಾನ, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಹೈಡ್ರೋಜನ್, ಬಾಹ್ಯಾಕಾಶ, ಡ್ರೋನ್ಗಳು, ಇಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ, ರೋಬಾಟಿಕ್ಸ್, ಸಂವಹನ ಮೂಲಸೌಕರ್ಯಗಳು ಮೊದಲಾದವು ಪ್ರಮುಖ ಕ್ಷೇತ್ರಗಳಾಗಿವೆ.* ವಿಶೇಷ ಮಾರ್ಗದರ್ಶಕ ಮಂಡಳಿ ಸ್ಟಾರ್ಟ್ಅಪ್ಗಳಿಗೆ ತಾಂತ್ರಿಕ ಮತ್ತು ಕಾರ್ಯತಂತ್ರದ ಸಲಹೆ ನೀಡಲಿದೆ. ಇದು ಆಯ್ದ ನವೋದ್ಯಮಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.