* ಭಾರತ-ಯುಎಸ್ ಜಂಟಿ ವಿಶೇಷ ಪಡೆಗಳ ವಜ್ರ ಪ್ರಹಾರದ 15 ನೇ ಆವೃತ್ತಿಗೆ ಭಾರತೀಯ ಸೇನಾ ತುಕಡಿ ಇಂದಿನಿಂದ (ನವೆಂಬರ್ 2) ರಿಂದ 22 ರವರೆಗೆ ಯುಎಸ್‌ ನ ಇಡಾಹೊದಲ್ಲಿರುವ ಆರ್ಚಡ್ ಯುದ್ಧ ತರಬೇತಿ ಕೇಂದ್ರದಲ್ಲಿ ಸಮರಾಭ್ಯಾಸ ನಡೆಸಲು ನಿರ್ಧರಿಸಲಾಗಿದೆ.* ಭಾರತ ಮತ್ತು ಅಮೆರಿಕ ಸೇನೆಯ ನಡುವಿನ ವರ್ಷದ ಎರಡನೇ ಸಮರಾಭ್ಯಾಸ ಇದಾಗಿದೆ. ಹಿಂದಿನ ವ್ಯಾಯಾಮ ಯುದ್ ಅಭ್ಯಾಸ 2024 ಅನ್ನು ಸಪ್ಟೆಂಬರ್ ನಲ್ಲಿ ರಾಜಸ್ಥಾನದಲ್ಲಿ ನಡೆಸಲಾಯಿತು.* ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸುವ ಎರಡೂ ದೇಶಗಳ ತುಕಡಿಗಳು ತಲಾ 45, ಸಿಬ್ಬಂದಿಯನ್ನು ಒಳಗೊಂಡಿರುತ್ತವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.* ಭಾರತೀಯ ಸೇನಾ ತುಕಡಿಯನ್ನು ವಿಶೇಷ ಪಡೆಗಳ ಘಟಕಗಳು ಪ್ರತಿನಿಧಿಸುತ್ತವೆ ಮತ್ತು US ಸೇನಾ ತುಕಡಿಯನ್ನು USನ ಗ್ರೀನ್ ಬೆರೆಟ್ಸ್ ಪ್ರತಿನಿಧಿಸುತ್ತಾರೆ.* ಪರಸ್ಪರ ಕಾರ್ಯಸಾಧ್ಯತೆ ಒಂಟಿ ಮತ್ತು ವಿಶೇಷ ಕಾರ್ಯಾಚರಣೆ ತಂತ್ರಗಳ ಪರಸ್ಪರ ವಿನಿಮಯದ ಮೂಲಕ ಭಾರತ ಮತ್ತು ಯುಎಸ್ ನಡುವಿನ ಮಿಲಿಟರಿ ಸಹಕಾರವನ್ನು ಉತ್ತೇಜಿಸುವುದು ವಜ್ರ ಪ್ರಹಾರ್ ಅಭ್ಯಾಸದ ಉದ್ದೇಶವಾಗಿದೆ.* ಕೊನೆಯ ಆವೃತ್ತಿಯನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಮೇಘಾಲಯದ ಉಮ್ರೋಯ್ ನಲ್ಲಿ ನಡೆಸಲಾಯಿತು.