* 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ 300ನೇ ಏಕದಿನ ಪಂದ್ಯವು ಗ್ಲೆನ್ ಫಿಲಿಪ್ಸ್ ಅವರ ಅದ್ಭುತವಾದ ಫ್ಲೈಯಿಂಗ್ ಕ್ಯಾಚ್ನಿಂದ ಅಂತ್ಯಗೊಂಡಿತು. * ವಿರಾಟ್ ಕೊಹ್ಲಿ ಅವರು ಮಾರ್ಚ್ 02 ರಂದು (ಭಾನುವಾರ) ನಡೆದ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದರೆ ‘ತ್ರಿಶತಕ’ ಪೂರೈಸಲಿದ್ದಾರೆ. ಈ ಪಂದ್ಯವು ಕೊಹ್ಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. * ಕೇವಲ 11 ರನ್ ಗಳಿಸಿದ ಕೊಹ್ಲಿ ಅವರು ಮ್ಯಾಟ್ ಹೆನ್ರಿ ಅವರ ಎಸೆತದಲ್ಲಿ ಫಿಲಿಪ್ಸ್ಗೆ ಕ್ಯಾಚ್ ನೀಡಿ ಔಟ್ ಆದರು. ಫಿಲಿಪ್ಸ್ ಈ ರೀತಿಯ ಕ್ಯಾಚ್ ಅನ್ನು ಪಾಕಿಸ್ತಾನದ ವಿರುದ್ಧವೂ ಹಿಡಿದಿದ್ದರು.* ಈ ಸಾಧನೆ ಮಾಡಿದ ಭಾರತದ 7ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಮಾತ್ರ ಟೀಮ್ ಇಂಡಿಯಾ ಪರ 300 ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ್ದಾರೆ.* ಭಾರತದ ಪರ ಈವರೆಗೆ 300 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ 287 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 15078 ಎಸೆತಗಳನ್ನು ಎದುರಿಸಿ ಒಟ್ಟು 14085 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.