* 2025ರ ಮೇ 7ರಂದು, ಯುಎನ್ ವೇಸಾಕ್ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಅಂತಾರಾಷ್ಟ್ರೀಯ ಬೌದ್ಧ ಫೆಡರೇಶನ್ (IBC) ಮತ್ತು ವಿಯೇಟ್ನಾಂ ಬೌದ್ಧ ಸಂಘ (VBS) ನಡುವೆ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಮೂಲಕ ವಿಯೇಟ್ನಾಂ ಶಾಖೆಯನ್ನು ಸ್ಥಾಪಿಸಲಾಯಿತು.ಪ್ರಮುಖ ಉದ್ದೇಶಗಳು :- ಭಾರತ-ವಿಯೇಟ್ನಾಂ ಬೌದ್ಧ ಸಮುದಾಯಗಳ ನಡುವಿನ ಸಹಕಾರವನ್ನು ಗಟ್ಟಿಪಡಿಸುವುದು. ಮತ್ತು ದಯೆ, ಜ್ಞಾನ, ಶಾಂತಿ ಎಂಬ ಬೌದ್ಧ ಮೌಲ್ಯಗಳನ್ನು ಪ್ರಚಾರ ಮಾಡುವುದು.- ಶಾಂತಿ, ಸಾಂಸ್ಕೃತಿಕ, ಶೈಕ್ಷಣಿಕ, ಮಾನವೀಯ ಕಾರ್ಯಕ್ರಮಗಳ ಮೂಲಕ ವಿಶ್ವಸೌಹಾರ್ದತೆ ಬೆಳೆಸುವುದು.- ವಿಯೇಟ್ನಾಂ ಬೌದ್ಧ ಸಮುದಾಯವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರತಿನಿಧಿಸುವ ವ್ಯವಸ್ಥೆ ಮಾಡುವುದು.* ಸಹಿ ಸಮಾರಂಭದಲ್ಲಿ ಭಾರತದ ಸಚಿವ ಕಿರಣ್ ರಿಜಿಜು, ಐಬಿಸಿ ಕಾರ್ಯದರ್ಶಿ ಶಾರ್ಟ್ಸೆ ಖೆನ್ಸುರ್ ರಿಂಪೋಚೆ, ವಿಯೇಟ್ನಾಂ ಬೌದ್ಧ ಸಂಘದ ಅಧ್ಯಕ್ಷ ಡಾ. ಥಿಚ್ ಥಿಯೆನ್ ನನ್, ಭಾರತದ ರಾಯಭಾರಿ ಸಂದೀಪ್ ಆರ್ಯ ಭಾಗವಹಿಸಿದ್ದರು.* IBC ಮತ್ತು VBS ನಡುವೆ ಮೊದಲ ಒಪ್ಪಂದ 2022ರ ಮೇ 29 ರಂದು ಸಹಿಯಾಗಿತ್ತು. ಈ ಹೊಸ ಒಪ್ಪಂದದೊಂದಿಗೆ ಸಹಕಾರವು ಮತ್ತಷ್ಟು ಬಲಪಡಿಸಿದೆ.* ಈ ಒಪ್ಪಂದವು ಭಾರತ-ವಿಯೇಟ್ನಾಂ ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಪಡಿಸುತ್ತದೆ. ಬೌದ್ಧ ಮೌಲ್ಯಗಳ ಪ್ರಚಾರದ ಮೂಲಕ ಭಾರತದ ನೈತಿಕ ರಾಜತಾಂತ್ರಿಕತೆ (ಬೌದ್ಧ ಡಿಪ್ಲೊಮಸಿ)ಗೆ ಬೆಂಬಲ ನೀಡುತ್ತದೆ.