* ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ 'ಎಕನಾಮಿಕ್ ಔಟ್ ಲುಕ್' ವರದಿಯ ಪ್ರಕಾರ, ಭಾರತವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಪಾನ್ನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ.* 2025–26ರ ಆರ್ಥಿಕ ವರ್ಷದಲ್ಲಿ ಭಾರತದ ನಾಮಮಾತ್ರ ಜಿಡಿಪಿ 4187.0178 ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ, ಇದು ಅಂದಾಜಿನ ಜಿಡಿಪಿಯಾದ 4186.431 ಬಿಲಿಯನ್ ಡಾಲರ್ಗಿಂತ ಸ್ವಲ್ಪ ಅಧಿಕವಾಗಿದೆ.* 2024 ರವರೆಗೆ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿತ್ತು; ಆದರೆ ಪ್ರಸಕ್ತ ವರ್ಷದಲ್ಲಿ ನಾಲ್ಕನೇ ಸ್ಥಾನಕ್ಕೆ ಏರುವ ನಿರೀಕ್ಷೆಯಿದೆ. ಮುಂದಿನ ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ.* 2028 ರ ವೇಳೆಗೆ ಭಾರತವು 5584.476 ಬಿಲಿಯನ್ ಡಾಲರ್ ಜಿಡಿಪಿಗೆ ತಲುಪುವ ನಿರೀಕ್ಷೆ ಇದೆ, ಇದು ಜರ್ಮನಿಯ 5251.928 ಬಿಲಿಯನ್ ಡಾಲರ್ಗಿಂತ ಸ್ವಲ್ಪ ಹೆಚ್ಚಿನದು.* 2027ರ ವೇಳೆಗೆ ಭಾರತದ ಜಿಡಿಪಿ 5069.47 ಬಿಲಿಯನ್ ಡಾಲರ್ ಆಗಿ, ದೇಶವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗಡಿಯನ್ನು ತಲುಪಲಿದೆ ಎಂದು ವರದಿ ಹೇಳುತ್ತದೆ.