* ಭಾರತದ ವಿಮಾನಯಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಅದು ಇತ್ತೀಚೆಗೆ ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿರುವುದಾಗಿ ಅಂತಾರಾಷ್ಟ್ರೀಯ ವಾಯುಸಾರಿಗೆ ಸಂಘಟನೆಯ (ಐಎಟಿಎ) ವರದಿ ಸ್ಪಷ್ಟಪಡಿಸಿದೆ.* ಬಲವಾದ ಮೂಲಭೂತ ಸೌಕರ್ಯಗಳು ಹಾಗೂ ವೃದ್ಧಿಯ ಗತಿಶೀಲತೆಯಿಂದ, ಭಾರತ ಜಾಗತಿಕ ಹಂತದಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ ಎಂದು ಭಾರತ, ನೇಪಾಳ ಮತ್ತು ಭೂತಾನ್ ಪ್ರದೇಶಗಳ ಐಎಟಿಎ ನಿರ್ದೇಶಕ ಅಮಿತಾಭ್ ಖೋಸ್ಲಾ ತಿಳಿಸಿದ್ದಾರೆ.* "ವಿಮಾನಯಾನ ಕ್ಷೇತ್ರವು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆ, ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.* ಇದು ದೇಶದ ಜಿಡಿಪಿಗೆ ಶೇಕಡಾ 1.5ರಷ್ಟು ಕೊಡುಗೆ ನೀಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುಮಾರು 7.7 ಮಿಲಿಯನ್ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ನೀಡುತ್ತಿದೆ.* 2023ರಲ್ಲಿ ಈ ಉದ್ಯಮವು ಭಾರತದ ಆರ್ಥಿಕತಿಗೆ ₹53.6 ಶತಕೋಟಿ ಮೌಲ್ಯದ ಕೊಡುಗೆಯನ್ನು ನೀಡಿದೆ" ಎಂದು ಅವರು ವಿವರಿಸಿದ್ದಾರೆ.