* ಭಾರತ ಮತ್ತು ಸಿಂಗಾಪುರದ ದ್ವಿಪಕ್ಷೀಯ ವ್ಯಾಪಾರವು 2022-23ರಲ್ಲಿ $35.6 ಬಿಲಿಯನ್‌ಗೆ ಏರಿದೆ ಎಂದು ಭಾರತೀಯ ಹೈಕಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ವರ್ಷದಲ್ಲಿ ಶೇಕಡಾ 18.2 ರಷ್ಟು ಏರಿಕೆಯಾಗಿದೆ.* ಭಾರತವು ಸಿಂಗಪುರದ ಎಂಟನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಒಟ್ಟಾರೆ ಪಾಲು ಶೇ 3.1ರಷ್ಟಿದೆ ಎಂದು ಭಾರತೀಯ ಹೈಕಮಿಷನರ್‌ ಕಚೇರಿಯ ಕಾರ್ಯದರ್ಶಿ ಟಿ.ಪ್ರಭಾಕರ ಅವರು ತಿಳಿಸಿದ್ದಾರೆ.* ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭಾರತ-ಸಿಂಗಪುರ ಸಚಿವರ ದುಂಡುಮೇಜಿನ ಉದ್ಘಾಟನಾ ಸಭೆಯು ಸೆಪ್ಟೆಂಬರ್ 2022 ರಲ್ಲಿ ನವದೆಹಲಿಯಲ್ಲಿ ನಡೆಯಿತು.* 2022-23ರಲ್ಲಿ ಸಿಂಗಪುರದಿಂದ ಭಾರತದ ಆಮದು ಮೊತ್ತ ₹1.96 ಲಕ್ಷ ಕೋಟಿ ದಾಟಿದೆ. ಒಟ್ಟಾರೆ ಆಮದಿನಲ್ಲಿ ಶೇ 24.4ರಷ್ಟು ಹೆಚ್ಚಳವಾಗಿದೆ. ರಫ್ತು ಪ್ರಮಾಣವು ಶೇ 7.6ರಷ್ಟು ಏರಿಕೆಯಾಗಿದ್ದು, ಈ ಅವಧಿಯಲ್ಲಿ ₹99,948 ಕೋಟಿಗೆ ಮುಟ್ಟಿದೆ ಎಂದು ವಿವರಿಸಿದರು.* ಸಿಂಗಪುರಕ್ಕೆ ಸರಕುಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಭಾರತವು ಆರನೇ ಸ್ಥಾನದಲ್ಲಿದ್ದರೆ, ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಎಂಟನೇ ಸ್ಥಾನದಲ್ಲಿದೆ.