* ಭಾರತ ಮತ್ತು ಶ್ರೀಲಂಕಾ ರಕ್ಷಣಾ ಸಹಕಾರಕ್ಕೆ ಮೊದಲ ಬಾರಿಗೆ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ನಡುವಿನ ಸುದೀರ್ಘ ಮಾತುಕತೆಯ ನಂತರ 7 ಮಹತ್ವದ ಒಪ್ಪಂದಗಳನ್ನು ಉಭಯ ದೇಶಗಳು ಸಹಿ ಹಾಕಿವೆ, ಇದರಲ್ಲಿ ರಕ್ಷಣಾ ಕ್ಷೇತ್ರ ಪ್ರಮುಖವಾಗಿದೆ.* ಒಟ್ಟು 10 ವಿಷಯಗಳ ಕುರಿತು ಒಪ್ಪಂದವಿದ್ದರೂ, ರಕ್ಷಣಾ ಸಂಬಂಧಿ ಒಪ್ಪಂದ ಪ್ರಾಥಮ್ಯ ಹೊಂದಿದೆ. 35 ವರ್ಷಗಳ ಹಿಂದೆ ಶ್ರೀಲಂಕಾದ ಶಾಂತಿಪಾಲನಾ ಪಡೆ ಹಿಂಪಡೆಯಲಾಗಿದ್ದ ಬಳಿಕ, ಇದೊಂದು ಹೊಸ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.* ಮೀನುಗಾರರ ಸಮಸ್ಯೆ ಹಾಗೂ ತಮಿಳು ಜನರ ಹಕ್ಕುಗಳ ಬಗ್ಗೆ ಮೋದಿ ಸ್ಪಷ್ಟನೆ ನೀಡಿದ್ದು, ಶ್ರೀಲಂಕಾದ ತಮಿಳು ಮುಖಂಡರೂ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.* ಗುಜರಾತ್ನ ಅರಾವಳಿಯಲ್ಲಿ ಪತ್ತೆಯಾಗಿದ್ದ ಬುದ್ಧನ ಅವಶೇಷಗಳನ್ನು ಅಧ್ಯಯನದ ಉದ್ದೇಶದಿಂದ ಶ್ರೀಲಂಕಾಕ್ಕೆ ಕಳುಹಿಸಲಾಗುವುದೆಂದು ಮೋದಿ ಘೋಷಿಸಿದ್ದಾರೆ.