* ಭಾರತ ಸೇರಿದಂತೆ ಅಣ್ವಸ್ತ್ರಗಳನ್ನು ಹೊಂದಿರುವ ಜಗತ್ತಿನ ಒಂಬತ್ತು ರಾಷ್ಟ್ರಗಳು 2023ರಲ್ಲಿ ಅಣ್ವಸ್ತ್ರಗಳನ್ನು ಆಧುನೀಕರಣಗೊಳಿಸುವುದರ ಜೊತೆಗೆ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ 5 ವ್ಯವಸ್ಥೆಗಳನ್ನು ನಿಯೋಜಿಸಿವೆ ಎಂದು ಸ್ವೀಡನ್‌ನ ಚಿಂತಕರ ಚಾವಡಿ ಸಂಸ್ಥೆ ಸ್ಟಾಕ್‌ಹೋಮ್ ಇಂಟರ್‌ನ್ಯಾಷ- ನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ('ಸಿಪ್ರಿ') ತಿಳಿಸಿದೆ. * ಭಾರತ, ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ ಮತ್ತು ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಇಸ್ರೇಲ್ ದೇಶಗಳನ್ನು 'ಸಿಪ್ರಿ' ಹೆಸರಿಸಿದೆ.* '2023ರ ಜನವರಿಯಲ್ಲಿ ಚೀನಾವು 410 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿತ್ತು. 2024ರ ಜನವರಿ ವೇಳೆಗೆ ಇದು 500ಕ್ಕೆ ಹೆಚ್ಚಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ' ಎಂದು 'ಸಿಪ್ರಿ' ಸಂಸ್ಥೆಯು ತನ್ನ ವಿಶ್ಲೇಷಣಾತ್ಮಕ ವರದಿಯಲ್ಲಿ ಹೇಳಿದೆ.* ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ ಎರಡು ಪರಮಾಣು ಬಾಂಬ್‌ಗಳು ಹೆಚ್ಚಿವೆ. ಭಾರತದ ಬಳಿ 172 ಅಣ್ವಸ್ತ್ರ ಸಿಡಿತಲೆಗಳಿದ್ದರೆ, ಪಾಕಿಸ್ತಾನವು 170 ಸಿಡಿತಲೆಗಳನ್ನು ಹೊಂದಿದೆ ಎಂದು 'ಸಿಪ್ರಿ' ತಿಳಿಸಿದೆ.* 2023ರಲ್ಲಿ ಭಾರತವು ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ವರ್ಷ ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಹೊಸ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಮುಂದುವರಿಸಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* 'ಭಾರತವು ಪಾಕಿಸ್ತಾನವನ್ನು ಕೇಂದ್ರವಾಗಿಸಿಕೊಂಡು ಅಣ್ವಸ್ತ್ರ ನಿರೋಧಕ ವ್ಯವಸ್ಥೆ ಅಭಿವೃದ್ಧಿ ಪಡಿಸಿರುವುದರ ಜೊತೆಗೆ, ಚೀನಾದಾದ್ಯಂತ ಇರುವ ಗುರಿಗಳನ್ನು ತಲುಪುವುದೂ ಸೇರಿದಂತೆ ದೂರಗಾಮಿ ಸಾಮರ್ಥ್ಯದ ಅಣ್ವಸ್ತ್ರ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುತ್ತಿದೆ' ಎಂದು 'ಸಿಪ್ರಿ' ವಿಶ್ಲೇಷಿಸಿದೆ.