Job Description: * ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಉನ್ನತ ಮಟ್ಟದ ಮಾತುಕತೆ ಭಾರತ–ರಷ್ಯಾ ಸ್ನೇಹಕ್ಕೆ ಹೊಸ ತಿರುವಿನಂತೆ ಪರಿಣಮಿಸಿದೆ. ಹಲವು ದಶಕಗಳಿಂದ ಪರಸ್ಪರ ವಿಶ್ವಾಸ, ತಂತ್ರಜ್ಞಾನ ಹಂಚಿಕೆ ಮತ್ತು ತಂತ್ರತಜ್ಞ ಬೆಂಬಲದ ಆಧಾರದ ಮೇಲೆ ನಿಂತಿರುವ ಈ ಸಂಬಂಧ ಈಗ 2030ರವರೆಗೆ ಸಮಗ್ರ ಆರ್ಥಿಕ ಸಹಕಾರದ ದಿಕ್ಕಿನಲ್ಲಿ ಬೃಹತ್ ಗುರಿ ಹೊಂದಿದೆ.* ಭಾರತ–ರಷ್ಯಾ “ವಿಷನ್ 2030” ಆರ್ಥಿಕ ಒಪ್ಪಂದ : ಈ ಮಾತುಕತೆಯ ಪ್ರಮುಖ ಫಲಿತಾಂಶವಾಗಿರುವ “ವಿಷನ್ 2030” ಡಾಕ್ಯುಮೆಂಟ್‌ಗೆ ಎರಡು ದೇಶಗಳ ನಾಯಕರೂ ಸಹಿ ಹಾಕಿದ್ದು, ಇದು ವ್ಯಾಪಾರ, ಕೈಗಾರಿಕೆ, ಇಂಧನ, ವಿಜ್ಞಾನ–ತಂತ್ರಜ್ಞಾನ, ನವೀನತೆ ಮತ್ತು ಪರಸ್ಪರ ಉತ್ಪಾದನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವಂತೆ ರೂಪಿಸಲಾಗಿದೆ. ಈ ಒಪ್ಪಂದವನ್ನು ಭಾರತ–ರಷ್ಯಾ ವ್ಯವಹಾರ ವೇದಿಕೆ (Business Forum) ಸಭೆಯ ಮುನ್ನವೇ ಅಂತಿಮಗೊಳಿಸಲಾಗಿದೆ.* 2030ರೊಳಗೆ 100 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ : ಈ ಹೊಸ ಯೊಜನೆ ಪ್ರಕಾರ, ಎರಡು ರಾಷ್ಟ್ರಗಳು 2030ರೊಳಗೆ ದ್ವಿಪಕ್ಷೀಯ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಏರಿಸುವ ಗುರಿ ಹೊಂದಿವೆ. ಪ್ರಸ್ತುತ 70 ಬಿಲಿಯನ್ ಡಾಲರ್‌ ಇರುವ ವ್ಯಾಪಾರವನ್ನು ಇನ್ನಷ್ಟು ಬಲಪಡಿಸಲು ನೀಲನಕ್ಷೆ (Roadmap) ಸಿದ್ಧವಾಗಿದೆ.* ಇಂಧನ ಕ್ಷೇತ್ರದಲ್ಲಿ ಗಟ್ಟಿಯಾದ ಸಹಕಾರ : ಅಂತರರಾಷ್ಟ್ರೀಯ ಒತ್ತಡಗಳ ನಡುವೆಯೂ ಭಾರತವು ರಷ್ಯಾದಿಂದ ತೈಲ ಆಮದು ಕಡಿಮೆ ಮಾಡದೆ ಮುಂದುವರಿಸಿರುವುದನ್ನು ಪುಟಿನ್ ಮೆಚ್ಚಿಕೊಂಡಿದ್ದು, “ಭಾರತಕ್ಕೆ ಅಗತ್ಯವಾದ ಇಂಧನವನ್ನು ನಿರಂತರ ಮತ್ತು ವಿಶ್ವಾಸಾರ್ಹವಾಗಿ ಪೂರೈಸುತ್ತೇವೆ” ಎಂದು ಬಲವಾದ ಸಂದೇಶ ನೀಡಿದ್ದಾರೆ. ಇದರಿಂದ ಪರಸ್ಪರ ಇಂಧನ ಅವಲಂಬನೆ ಇನ್ನಷ್ಟು ಗಟ್ಟಿಗೊಳ್ಳಲಿದೆ.* ಮುಕ್ತ ವ್ಯಾಪಾರ ಒಪ್ಪಂದಕ್ಕೆ ಚರ್ಚೆಗಳು ವೇಗ : ಮೋದಿ–ಪುಟಿನ್ ಭೇಟಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತೂ ಫಲಕಾರಿ ಚರ್ಚೆಗಳು ನಡೆದಿದ್ದು, ಇದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ–ವ್ಯವಹಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಉತ್ಪಾದನೆ, ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ ಹಂಚಿಕೆಯ ಹೊಸ ಮಾರ್ಗಗಳು ತೆರೆಯಲಿವೆ. * ಪ್ರಮುಖ ನಿರ್ಧಾರಗಳು :-- 1. ಕಡಲ ರಕ್ಷಣೆ, ಬಂದರುಗಳ ಅಭಿವೃದ್ಧಿಗೆ ಸಹಕಾರ 2. ಧ್ರುವೀಯ ನೀರಿನಲ್ಲಿ ಹಡಗುಗಳ ನಿರ್ವಹಣೆ ತರಬೇತಿ 3. ರಸಗೊಬ್ಬರ ಪೂರೈಕೆ ಸರಪಳಿ ಬಲಪಡಿಸಲು ಸಹಕಾರ 4. ಜಾಗತಿಕ ವನ್ಯಜೀವಿ ಸಂರಕ್ಷಣಾ ಸಹಕಾರ ಒಪ್ಪಂದ 5. ರಷ್ಯಾ ಪ್ರಜೆಗಳಿಗೆ 30 ದಿನಗಳ ಕಾಲ ಪ್ರವಾಸಿ ಇ-ವೀಸಾ 6. ರಷ್ಯಾದ ಅನೊ ಟಿವಿ ಜತೆ ಭಾರತದ ಪ್ರಸಾರ ಭಾರತಿ ಒಪ್ಪಂದ * ಮುಂದಿನ ದಿಕ್ಕು : ಭಾರತ–ರಷ್ಯಾ ಬ್ಯುಸಿನೆಸ್ ಫೋರಂನಲ್ಲಿ ಇಬ್ಬರೂ ನಾಯಕರು ಭಾಗವಹಿಸುವ ಮೂಲಕ ಉದ್ಯಮ–ವ್ಯವಹಾರ ವಲಯಕ್ಕೆ ಹೊಸ ವೇಗ ನೀಡುವ ಸಾಧ್ಯತೆ ಇದೆ. ‘ಪರಸ್ಪರ ಸಹಕಾರದ ಹೊಸ ಯುಗಕ್ಕೆ ನಾವು ಕಾಲಿಡುತ್ತಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.* ಒಟ್ಟಾರೆ, “ವಿಷನ್ 2030” ಮೂಲಕ ಭಾರತ ಮತ್ತು ರಷ್ಯಾ ಜಾಗತಿಕ ಆರ್ಥಿಕ ಹಾಗೂ ಜಿಯೋಪಾಲಿಟಿಕಲ್ ವೇದಿಕೆಯಲ್ಲಿ ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸನ್ನದ್ಧವಾಗಿವೆ. ಈ ಒಪ್ಪಂದ ಎರಡು ರಾಷ್ಟ್ರಗಳಿಗು ಹೊಸ ಹೂಡಿಕೆ, ವ್ಯಾಪಾರ ಮತ್ತು ತಂತ್ರಜ್ಞಾನ ನವೀಕರಣಗಳಿಗೆ ಬಾಗಿಲು ತೆರೆದಿದೆ.