Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತ–ರಷ್ಯಾ ಬಾಂಧವ್ಯಕ್ಕೆ ಹೊಸ ಅಧ್ಯಾಯ: 100 ಬಿಲಿಯನ್ ಡಾಲರ್ ವ್ಯಾಪಾರ ಗುರಿ”
8 ಡಿಸೆಂಬರ್ 2025
* ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಉನ್ನತ ಮಟ್ಟದ ಮಾತುಕತೆ ಭಾರತ–ರಷ್ಯಾ ಸ್ನೇಹಕ್ಕೆ ಹೊಸ ತಿರುವಿನಂತೆ ಪರಿಣಮಿಸಿದೆ. ಹಲವು ದಶಕಗಳಿಂದ ಪರಸ್ಪರ ವಿಶ್ವಾಸ, ತಂತ್ರಜ್ಞಾನ ಹಂಚಿಕೆ ಮತ್ತು ತಂತ್ರತಜ್ಞ ಬೆಂಬಲದ ಆಧಾರದ ಮೇಲೆ ನಿಂತಿರುವ ಈ ಸಂಬಂಧ ಈಗ
2030ರವರೆಗೆ ಸಮಗ್ರ ಆರ್ಥಿಕ ಸಹಕಾರದ ದಿಕ್ಕಿನಲ್ಲಿ ಬೃಹತ್ ಗುರಿ ಹೊಂದಿದೆ.
*
ಭಾರತ–ರಷ್ಯಾ “ವಿಷನ್ 2030” ಆರ್ಥಿಕ ಒಪ್ಪಂದ :
ಈ ಮಾತುಕತೆಯ ಪ್ರಮುಖ ಫಲಿತಾಂಶವಾಗಿರುವ
“ವಿಷನ್ 2030”
ಡಾಕ್ಯುಮೆಂಟ್ಗೆ ಎರಡು ದೇಶಗಳ ನಾಯಕರೂ ಸಹಿ ಹಾಕಿದ್ದು, ಇದು ವ್ಯಾಪಾರ, ಕೈಗಾರಿಕೆ, ಇಂಧನ, ವಿಜ್ಞಾನ–ತಂತ್ರಜ್ಞಾನ, ನವೀನತೆ ಮತ್ತು ಪರಸ್ಪರ ಉತ್ಪಾದನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವಂತೆ ರೂಪಿಸಲಾಗಿದೆ. ಈ ಒಪ್ಪಂದವನ್ನು ಭಾರತ–ರಷ್ಯಾ ವ್ಯವಹಾರ ವೇದಿಕೆ (Business Forum) ಸಭೆಯ ಮುನ್ನವೇ ಅಂತಿಮಗೊಳಿಸಲಾಗಿದೆ.
*
2030ರೊಳಗೆ 100 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಗುರಿ :
ಈ ಹೊಸ ಯೊಜನೆ ಪ್ರಕಾರ, ಎರಡು ರಾಷ್ಟ್ರಗಳು 2030ರೊಳಗೆ ದ್ವಿಪಕ್ಷೀಯ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್ ಡಾಲರ್ಗೆ ಏರಿಸುವ ಗುರಿ ಹೊಂದಿವೆ. ಪ್ರಸ್ತುತ 70 ಬಿಲಿಯನ್ ಡಾಲರ್ ಇರುವ ವ್ಯಾಪಾರವನ್ನು ಇನ್ನಷ್ಟು ಬಲಪಡಿಸಲು ನೀಲನಕ್ಷೆ (Roadmap) ಸಿದ್ಧವಾಗಿದೆ.
*
ಇಂಧನ ಕ್ಷೇತ್ರದಲ್ಲಿ ಗಟ್ಟಿಯಾದ ಸಹಕಾರ :
ಅಂತರರಾಷ್ಟ್ರೀಯ ಒತ್ತಡಗಳ ನಡುವೆಯೂ ಭಾರತವು ರಷ್ಯಾದಿಂದ ತೈಲ ಆಮದು ಕಡಿಮೆ ಮಾಡದೆ ಮುಂದುವರಿಸಿರುವುದನ್ನು ಪುಟಿನ್ ಮೆಚ್ಚಿಕೊಂಡಿದ್ದು, “
ಭಾರತಕ್ಕೆ ಅಗತ್ಯವಾದ ಇಂಧನವನ್ನು ನಿರಂತರ ಮತ್ತು ವಿಶ್ವಾಸಾರ್ಹವಾಗಿ ಪೂರೈಸುತ್ತೇವೆ”
ಎಂದು ಬಲವಾದ ಸಂದೇಶ ನೀಡಿದ್ದಾರೆ. ಇದರಿಂದ ಪರಸ್ಪರ ಇಂಧನ ಅವಲಂಬನೆ ಇನ್ನಷ್ಟು ಗಟ್ಟಿಗೊಳ್ಳಲಿದೆ.
*
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಚರ್ಚೆಗಳು ವೇಗ :
ಮೋದಿ–ಪುಟಿನ್ ಭೇಟಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತೂ ಫಲಕಾರಿ ಚರ್ಚೆಗಳು ನಡೆದಿದ್ದು, ಇದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ–ವ್ಯವಹಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಉತ್ಪಾದನೆ, ನಾವೀನ್ಯತೆ, ಹೂಡಿಕೆ ಮತ್ತು ತಂತ್ರಜ್ಞಾನ ಹಂಚಿಕೆಯ ಹೊಸ ಮಾರ್ಗಗಳು ತೆರೆಯಲಿವೆ.
* ಪ್ರಮುಖ ನಿರ್ಧಾರಗಳು :--
1. ಕಡಲ ರಕ್ಷಣೆ, ಬಂದರುಗಳ ಅಭಿವೃದ್ಧಿಗೆ ಸಹಕಾರ
2. ಧ್ರುವೀಯ ನೀರಿನಲ್ಲಿ ಹಡಗುಗಳ ನಿರ್ವಹಣೆ ತರಬೇತಿ
3. ರಸಗೊಬ್ಬರ ಪೂರೈಕೆ ಸರಪಳಿ ಬಲಪಡಿಸಲು ಸಹಕಾರ
4. ಜಾಗತಿಕ ವನ್ಯಜೀವಿ ಸಂರಕ್ಷಣಾ ಸಹಕಾರ ಒಪ್ಪಂದ
5. ರಷ್ಯಾ ಪ್ರಜೆಗಳಿಗೆ 30 ದಿನಗಳ ಕಾಲ ಪ್ರವಾಸಿ ಇ-ವೀಸಾ
6. ರಷ್ಯಾದ ಅನೊ ಟಿವಿ ಜತೆ ಭಾರತದ ಪ್ರಸಾರ ಭಾರತಿ ಒಪ್ಪಂದ
* ಮುಂದಿನ ದಿಕ್ಕು :
ಭಾರತ–ರಷ್ಯಾ ಬ್ಯುಸಿನೆಸ್ ಫೋರಂನಲ್ಲಿ ಇಬ್ಬರೂ ನಾಯಕರು ಭಾಗವಹಿಸುವ ಮೂಲಕ ಉದ್ಯಮ–ವ್ಯವಹಾರ ವಲಯಕ್ಕೆ ಹೊಸ ವೇಗ ನೀಡುವ ಸಾಧ್ಯತೆ ಇದೆ. ‘ಪರಸ್ಪರ ಸಹಕಾರದ ಹೊಸ ಯುಗಕ್ಕೆ ನಾವು ಕಾಲಿಡುತ್ತಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
* ಒಟ್ಟಾರೆ, “ವಿಷನ್ 2030” ಮೂಲಕ ಭಾರತ ಮತ್ತು ರಷ್ಯಾ ಜಾಗತಿಕ ಆರ್ಥಿಕ ಹಾಗೂ ಜಿಯೋಪಾಲಿಟಿಕಲ್ ವೇದಿಕೆಯಲ್ಲಿ ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಸನ್ನದ್ಧವಾಗಿವೆ. ಈ ಒಪ್ಪಂದ ಎರಡು ರಾಷ್ಟ್ರಗಳಿಗು ಹೊಸ ಹೂಡಿಕೆ, ವ್ಯಾಪಾರ ಮತ್ತು ತಂತ್ರಜ್ಞಾನ ನವೀಕರಣಗಳಿಗೆ ಬಾಗಿಲು ತೆರೆದಿದೆ.
Take Quiz
Loading...