* ವ್ಯಾಪಾರ, ಹೂಡಿಕೆ, ಮರುಬಳಕೆ ಇಂಧನ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಟ್ಟಿಗೊಳಿಸಲು ಭಾರತ ಹಾಗೂ ಪೋರ್ಚುಗಲ್ ಒಪ್ಪಂದಕ್ಕೆ ಬಂದಿವೆ.* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ದಿನಗಳ ಪೋರ್ಚುಗಲ್ ಭೇಟಿಯ ಸಂದರ್ಭದಲ್ಲೇ, ಆ ದೇಶದ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೌಸಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.* ಪೋರ್ಚುಗಲ್ ಅಧ್ಯಕ್ಷರ ನಿವಾಸದಲ್ಲಿ ನಡೆದ ಸಂವಾದದಲ್ಲಿ, ವಿಶ್ವಸಂಸ್ಥೆ ಮತ್ತು ಇತರೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಹಭಾಗಿತ್ವವನ್ನು ವೃದ್ಧಿಸಲು ನಿರ್ಧರಿಸಲಾಗಿದೆ.* ವಿಜ್ಞಾನ, ತಂತ್ರಜ್ಞಾನ, ಮರುಬಳಕೆ ಇಂಧನ, ಹೂಡಿಕೆ ಸೇರಿದಂತೆ ಸಾಮಾನ್ಯ ಆಸಕ್ತಿಯ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಚರ್ಚೆಗಳು ನಡೆದಿವೆ.* ಭಾರತದ ರಾಷ್ಟ್ರಪತಿ ಪೋರ್ಚುಗಲ್ಗೆ ಭೇಟಿ ನೀಡುವುದು 27 ವರ್ಷಗಳ ಬಳಿಕ ಇದಾಗಿದೆ. ಈ ದೇಶದಲ್ಲಿ ಸುಮಾರು 1.25 ಲಕ್ಷ ಭಾರತೀಯರು ನೆಲೆಸಿದ್ದಾರೆ.