* ಫಿಜಿಯ ಪ್ರಧಾನಿ ಸಿತಿವೇನಿ ಲಿಗಮಮಾಡ ಬರಬುಕಾ ಅವರು ಸೋಮವಾರ(ಆಗಸ್ಟ್ 25) ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.* ಈ ಸಂದರ್ಭದಲ್ಲಿ ಭಾರತ–ಫಿಜಿ ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು ಮತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.* ಭಾರತ ಮತ್ತು ಫಿಜಿ ದೂರದಲ್ಲಿದ್ದರೂ ಉಭಯರ ಆಸೆಗಳು ಒಂದೇ. ರಕ್ಷಣಾ–ಭದ್ರತಾ ಸಹಕಾರಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು. * ಇಂಡೋ–ಪೆಸಿಫಿಕ್ ಪ್ರದೇಶವು ಒಳಗೊಂಡ, ಸುರಕ್ಷಿತ ಮತ್ತು ಸಮೃದ್ಧವಾಗಿರಬೇಕು ಎಂಬುದು ಉಭಯ ರಾಷ್ಟ್ರಗಳ ಗುರಿ.* ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ಕರಾವಳಿ ಭದ್ರತೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ಫಿಜಿಯೊಂದಿಗೆ ಭಾರತ ತನ್ನ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ತೀರ್ಮಾನಿಸಿದೆ.