* 'ಭಾರತ್ ನೆಟ್' ಯೋಜನೆಯಡಿಯಲ್ಲಿ ಬ್ರಾಡ್‌ ಬ್ಯಾಂಡ್ ಸಂಪರ್ಕವನ್ನು ದೇಶದಾದ್ಯಂತ 6.4 ಲಕ್ಷ ಹಳ್ಳಿಗಳಿಗೆ 1.39 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ  ಕಲ್ಪಿಸಲು ಸರಕಾರ ಮುಂದಾಗಿದೆ. * ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ, ದೇಶದ ಪ್ರತಿ ಗ್ರಾಮಕ್ಕೂ ನೆಟ್ ಸಂಪರ್ಕ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ . * ಸುಮಾರು 1.94 ಲಕ್ಷ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು ಉಳಿದ ಗ್ರಾಮಗಳಿಗೆ ಎರಡೂವರೆ ವರ್ಷಗಳಲ್ಲಿ ಸಂಪರ್ಕವನ್ನು ಕಲ್ಪಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ . * ಬ್ರಾಡ್‌ಬ್ಯಾಂಡ್ ಸಂಪರ್ಕವು ಗ್ರಾಮೀಣ ಪ್ರದೇಶಗಳನ್ನು ಸಶಕ್ತಗೊಳಿಸಲು ಪ್ರಾರಂಭಿಸಿದೆ. ಯೋಜನೆಯನ್ನು ಪ್ರಾಯೋಗಿಕವಾಗಿ 60 ಸಾವಿರ ಹಳ್ಳಿಗಳಲ್ಲಿ ಜಾರಿಗೊಳಿಸಿದ್ದು, ಸುಮಾರು 3,800 ಉದ್ಯಮಿಗಳು ಭಾಗಿಯಾಗಿದ್ದಾರೆ.