* ಅಳಿವಿನಂಚಿನಲ್ಲಿರುವ ಏಳು ಜಾತಿಯ ದೊಡ್ಡಬೆಕ್ಕುಗಳನ್ನು ಸಂರಕ್ಷಿಸುವ ಉದ್ದೇಶವನ್ನು ಹೊಂದಿರುವ ಭಾರತದ ಮಹತ್ವಾಕಾಂಕ್ಷೆ ಯೋಜನೆ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ಗೆ (ಐಬಿಸಿಎ) ನೇಪಾಳ ಅಧಿಕೃತವಾಗಿ ಸೇರ್ಪಡೆಗೊಂಡಿದೆ. * ನೇಪಾಳವು ಪ್ರೇಮ್ನರ್ಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಔಪಚಾರಿಕವಾಗಿ ಐಬಿಸಿಎಗೆ ಸೇರಿದೆ ಎಂದು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ಗೆ (ಐಬಿಸಿಎ) ಘೋಷಿಸಿದೆ. * ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ 90ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿದ್ದು, ಬಹು ಏಜೆನ್ಸಿ ಒಕ್ಕೂಟವಾಗಿದೆ. ಹಿಮ ಚಿರತೆ, ಹುಲಿ ಮತ್ತು ಸಾಮಾನ್ಯ ಚಿರತೆ ನೇಪಾಳದಲ್ಲಿ ವಾಸಸ್ಥಾನಗಳನ್ನು ಹೊಂದಿರುವುದರಿಂದ ಐಬಿಸಿಎಗೆ ಸೇರ್ಪಡೆಗೊಳ್ಳುವ ಮೂಲಕ ತನ್ನ ಜಾಗತಿಕ ಸಹಯೋಗವನ್ನು ಬಲಪಡಿಸಲು ನೇಪಾಳ ಇಚ್ಚಿಸಿದೆ. * ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಿಟ್ಟಿರುವ ನೇಪಾಳಕ್ಕೆ ಭಾರತ ಸರಕಾರವು ಅಭಿನಂದಿಸಿದೆ. 2009ರಲ್ಲಿ ಕೇವಲ 121 ಹುಲಿಗಳನ್ನು ಹೊಂದಿದ್ದ ನೇಪಾಳವು 2022ರಲ್ಲಿ 355ಕ್ಕೆ ಅಂದರೆ ಮೂರುಪಟ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.* ಪ್ರಧಾನಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್ 9ರಂದು ಕರ್ನಾಟಕದ ಮೈಸೂರಿನಲ್ಲಿ ಏಳು ದೊಡ್ಡ ಬೆಕ್ಕುಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಜಾಗ್ವಾರ್ ಮತ್ತು ಪೂಮಾಗಳ ಜಾಗತಿಕ ಸಂರಕ್ಷಣೆಗಾಗಿ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ (ಐಬಿಸಿಎ) ಅನ್ನು ಪ್ರಾರಂಭಿಸಿದ್ದರು. ಪ್ರಸ್ತುತ ಐಬಿಸಿಎನಲ್ಲಿ 96 ದೇಶಗಳು ಸೇರ್ಪಡೆಗೊಂಡಿವೆ.* ಭಾರತವು ಹುಲಿ ಕಾರ್ಯಸೂಚಿಯಲ್ಲಿ ದೀರ್ಘಕಾಲದ ಅನುಭವವನ್ನು ಹೊಂದಿದೆ ಮತ್ತು ಸಿಂಹ, ಹಿಮ ಚಿರತೆ ಮತ್ತು ಚಿರತೆಯಂತಹ ಇತರ ದೊಡ್ಡ ಬೆಕ್ಕುಗಳಿಗೆ ಅನುಕರಣೀಯ ಸಂರಕ್ಷಣಾ ಮಾದರಿಗಳನ್ನು ಹೊಂದಿದೆ.* ಈ ವೇದಿಕೆಯ ಸಹಾಯದಿಂದ ಬಿಗ್ ಕ್ಯಾಟ್ ರೇಂಜ್ ದೇಶಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ದೊಡ್ಡ ಬೆಕ್ಕುಗಳನ್ನು ಸಂರಕ್ಷಿಸಲು ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಬಹುದು.