Job Description: * ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಲೆಫ್ಟಿನೆಂಟ್ ಗವರ್ನ‌ ಆಗಿ ಅರುಣಾ ಮಿಲ್ಲರ್ (58) ಅವರು ಅಧಿಕಾರ ವಹಿಸಿಕೊಂಡಿದ್ದು, ತನ್ಮೂಲಕ ಈ ಉನ್ನತ ಹುದ್ದೆಗೇರಿದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಲೆಫ್ಟಿನೆಂಟ್ ಗವರ್ನರ್ ಆಗಿರುವುದು ಇದೇ ಮೊದಲಾಗಿದೆ. ಯುಎಸ್ ಮಧ್ಯಂತರ ಚುನಾವಣೆಯ ಭಾಗವಾಗಿ, ಡೆಮಾಕ್ರಟಿಕ್ ನಾಯಕ ವೆಸ್ ಮೂರ್ ಮೇರಿಲ್ಯಾಂಡ್‌ನ ಗವರ್ನರ್ ಹುದ್ದೆಗೆ ಸ್ಪರ್ಧಿಸಿದರೆ, ಅರುಣಾ ಮಿಲ್ಲರ್ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಇಬ್ಬರೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ವಿರುದ್ಧ ಗೆದ್ದಿದ್ದಾರೆ.