* ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ 67ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.* ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ 'ಬೆಸ್ಟ್ ನ್ಯೂ ಏಜ್' ಆಲ್ಬಂ ವಿಭಾಗದಲ್ಲಿ ಟಂಡನ್ ಅವರ 'ತ್ರಿವೇಣಿ' ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.* ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.* ಲಾಸ್ ಏಂಜಲೀಸ್ನಲ್ಲಿ 67ನೇ ಅತಿ ದೊಡ್ಡ ಸಂಗೀತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಟಂಡನ್ ಅವರು 2009ರಲ್ಲಿ 'ಸೋಲ್ ಕಾಲ್' ಎನ್ನುವ ಆಲ್ಬಂಗೆ ಮೊದಲನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು.* 2024ರ ಆಗಸ್ಟ್ 30ರಂದು ತ್ರಿವೇಣಿ ಆಲ್ಬಂ ಬಿಡುಗಡೆಯಾಗಿದ್ದು, ಒಟ್ಟು ಏಳು ಹಾಡುಗಳ ಈ ಆಲ್ಬಂನಲ್ಲಿ, ಪ್ರತಿಯೊಂದು ಹಾಡು ಬೇರೆ ಬೇರೆ ಕಥೆಯನ್ನು ಹೇಳುತ್ತದೆ ಎಂದು ಟಂಡನ್ ಅವರ ತಂಡ ಹೇಳಿದೆ.* ಚಂದ್ರಿಕಾ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ‘ಸೋಲ್ ಚಾಂಟ್ಸ್ ಮ್ಯೂಸಿಕ್’ ಹೆಸರಿನ ನಾನ್ ಪ್ರಾಫಿಟೆಬಲ್ ಮ್ಯೂಸಿಕ್ ಲೇಬಲ್ನ 2005ರಲ್ಲಿ ಆರಂಭಿಸಿದರು.* ಅವರು ಶಿಕ್ಷಣ ಕ್ರೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಕಲ್ಯಾಣಕ್ಕೆ ಅವರು ಶ್ರಮಿಸಿದ್ದಾರೆ. ನ್ಯೂಯಾರ್ಕ್ನ ಹಿಂದೂ ದೇವಾಲಯಕ್ಕೆ ಅವರು ಸಾಕಷ್ಟು ದಾನ ಮಾಡಿದ್ದಾರೆ. ಮಹಿಳಾ ಕಲ್ಯಾಣದತ್ತವೂ ಅವರು ಗಮನ ಹರಿಸಿದ್ದಾರೆ.