* ಭಾರತೀಯ ಸೇನೆ ಮತ್ತು ಸಿಂಗಾಪುರ ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸವಾದ ಜಂಟಿ ಮಿಲಿಟರಿ ವ್ಯಾಯಾಮ ಅಗ್ನಿ ವಾರಿಯರ್ (XAW-2024) ನ 13 ನೇ ಆವೃತ್ತಿಯು ಶನಿವಾರದಂದು( ನವೆಂಬರ್ 30) ದೇವ್ಲಾಲಿ (ಮಹಾರಾಷ್ಟ್ರ) ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಮುಕ್ತಾಯಗೊಂಡಿತು.* ನವೆಂಬರ್ 28 ರಿಂದ 30 ರವರೆಗೆ ನಡೆದ ಮೂರು ದಿನಗಳ ಸಮರಾಭ್ಯಾಸದಲ್ಲಿ ಸಿಂಗಾಪುರದ ಆರ್ಮ್ಡ್ ಫೋರ್ಸ್ 182 ಸಿಂಗಾಪೂರ್ ಫಿರಂಗಿ ಮತ್ತು ಭಾರತೀಯ ಸೇನಾ ತುಕಡಿಯಿಂದ 114 ಫಿರಂಗಿದಳದ ಸೈನಿಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.* "XAW-2024 ರ ಗುರಿಯು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ ಬಹುರಾಷ್ಟ್ರೀಯ ಶಕ್ತಿಯಾಗಿ ಜಂಟಿ ಸಾಧಿಸಲು ಡ್ರಿಲ್ಗಳು ಮತ್ತು ಕಾರ್ಯವಿಧಾನಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವುದು" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.* ಈ ವ್ಯಾಯಾಮವು ಜಂಟಿ ಫೈರ್ಪವರ್ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಎರಡೂ ಸೇನೆಗಳ ಫಿರಂಗಿದಳದಿಂದ ಹೊಸ ತಲೆಮಾರಿನ ಸಲಕರಣೆಗಳ ಬಳಕೆಯನ್ನು ಪ್ರದರ್ಶಿಸಿತು.* ಅಕ್ಟೋಬರ್ನಲ್ಲಿ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್ಜಿ ಇಂಗ್ ಹೆನ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಂಟಿ ಮಿಲಿಟರಿ ತರಬೇತಿಯ ಕುರಿತಾಗಿ ಇದ್ದ ಒಪ್ಪಂದವನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿತ್ತು.