* ಭಾರತ ಮತ್ತು ಇಸ್ರೇಲ್ನಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು ಮತ್ತು ಹೂಡಿಕೆಯನ್ನು ರಕ್ಷಿಸುವ ಗುರಿಯೊಂದಿಗೆ ಎರಡೂ ದೇಶಗಳು ಸೆಪ್ಟೆಂಬರ್ 08 ರಂದು (ಸೋಮವಾರ) ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. * ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್ನ ರಾಜ್ಯ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರು ಸಹಿ ಮಾಡಿರುವ ಒಪ್ಪಂದ ಎರಡೂ ದೇಶಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಿ, ಹೂಡಿಕೆದಾರರಿಗೆ ಹೆಚ್ಚಿನ ಖಚಿತತೆ ಮತ್ತು ರಕ್ಷಣೆ ಒದಗಿಸಲಿದೆ.* ಭಾರತ ಮತ್ತು ಇಸ್ರೇಲ್ ನವದೆಹಲಿಯಲ್ಲಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದವು, ಪರಸ್ಪರ ಹೂಡಿಕೆಗಳನ್ನು ಹೆಚ್ಚಿಸುವುದು, ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಹಣಕಾಸು ನಾವೀನ್ಯತೆಯಲ್ಲಿ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. * ಈ ಒಪ್ಪಂದಕ್ಕೆ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್ ಹಣಕಾಸು ಸಚಿವೆ ಬೆಜಲೆಲ್ ಸ್ಮೋಟ್ರಿಚ್ ಸಹಿ ಹಾಕಿದರು.* ಈ ಒಪ್ಪಂದ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಹೂಡಿಕೆಯ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ ಉಭಯ ದೇಶಗಳ ನಡಚುವಿನ ಹೂಡಿಕೆ 800 ಮಿಲಿಯನ್ ಡಾಲರ್ (7000 ಕೋಟಿ ರೂ.) ಇದ್ದು, ಇದು ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ವ್ಯವಹಾರ ಮತ್ತು ಆರ್ಥಿಕತೆಗೆ ಪ್ರಯೋಜನವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. * ಇಸ್ರೇಲ್ ಏಪ್ರಿಲ್ 2000ದಿಂದ ಜೂನ್ 2025ರವರೆಗೆ ವಿದೇಶ ನೇರ ಹೂಡಿಕೆ ಅಡಿಯಲ್ಲಿ 337.77 ಮಿಲಿಯನ್ ಡಾಲರ್ (3300 ಕೋಟಿ ರೂ.) ಹೂಡಿಕೆ ಮಾಡಿದೆ.* ಪ್ರಸ್ತುತ, ಭಾರತ-ಇಸ್ರೇಲ್ ದ್ವಿಪಕ್ಷೀಯ ಹೂಡಿಕೆಗಳು ಸುಮಾರು 800 ಮಿಲಿಯನ್ ಯುಎಸ್ ಡಾಲರ್ಗಳಷ್ಟಿವೆ. ಹೊಸ ಒಪ್ಪಂದವು ಬಂಡವಾಳದ ಹರಿವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ, ವಿಶೇಷವಾಗಿ ಹೆಚ್ಚಿನ ಸಾಮರ್ಥ್ಯದ ವಲಯಗಳಲ್ಲಿ,