Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತ್ ಮಂಟಪದಲ್ಲಿ ವಿಜ್ಞಾನ–ತಂತ್ರಜ್ಞಾನ ನಾವೀನ್ಯತೆ ಸಮಾವೇಶ ಉದ್ಘಾಟನೆ
4 ನವೆಂಬರ್ 2025
* ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ
ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನ ನಾವೀನ್ಯತೆ ಸಮಾವೇಶ
ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ, ಮಧ್ಯಂತರ ಬಜೆಟ್ ನಲ್ಲಿ ಘೋಷಿಸಲ್ಪಟ್ಟ
ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನೆ
ಗೆ ಸಂಬಂಧಿಸಿದ
₹1 ಲಕ್ಷ ಕೋಟಿ
ರೂ.ಗಳ ಮಹತ್ವದ ನಿಧಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಸಮಯದಲ್ಲಿ ಈ ನಿಧಿ ಕುರಿತು ಮಾಹಿತಿ ನೀಡಿದ್ದರೂ, ಇದು ಖಾಸಗಿ ವಲಯವನ್ನು ಸಂಶೋಧನೆ ಮತ್ತು ನವೀನ ಉಪಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ.
* ಈ ಸಮಾವೇಶವು
ನವೆಂಬರ್ 3ರಿಂದ 5ರವರೆಗೆ
ನಡೆಯಲಿದ್ದು, ನೊಬೆಲ್ ಪ್ರಶಸ್ತಿ ವಿಜೇತರು, ಅಂತರರಾಷ್ಟ್ರೀಯ ವಿಜ್ಞಾನಿಗಳು, ತಂತ್ರಜ್ಞಾನ ತಜ್ಞರು, ನೀತಿ ಸಂಶೋಧಕರು, ಉದ್ಯಮಿಗಳು ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
* ಆರು ವರ್ಷಗಳ ಅವಧಿಗೆ ರೂಪಿಸಲಾದ ಈ RDI ಯೋಜನೆಗೆ ₹1 ಲಕ್ಷ ಕೋಟಿ ರೂ. ವೆಚ್ಚ ನಿಗದಿಯಾಗಿದೆ. 2025–26ನೇ ಸಾಲಿಗೆ
₹20 ಸಾವಿರ ಕೋಟಿ ರೂ.
ಅನುಮೋದಿಸಲಾಗಿದೆ. ಈ ಯೋಜನೆಯಡಿಯಲ್ಲಿ
ಕಡಿಮೆ ಬಡ್ಡಿದರದ ದೀರ್ಘಾವಧಿ ಸಾಲಗಳು
,
ಷೇರು ಹೂಡಿಕೆಗಳು
ಮತ್ತು
ಡೀಪ್–ಟೆಕ್ ನಿಧಿಗಳಿಗೆ ನೆರವು
ದೊರೆಯಲಿದೆ. ಆದರೆ ಯಾವುದೇ ರೀತಿಯ
ಅನುದಾನಗಳು
ಅಥವಾ
ಕಡಿಮೆ ಅವಧಿಯ ಸಾಲಗಳು
ಇರಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
* ಕಳೆದ 10–11 ವರ್ಷಗಳಲ್ಲಿ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೂಲಭೂತ ಪರಿವರ್ತನೆ ಕಂಡಿದೆ.ಭಾರತ ಈಗ ತಂತ್ರಜ್ಞಾನಗಳ ಬಳಕೆದಾರ ರಾಷ್ಟ್ರವಲ್ಲ; ಅದರ ಮೂಲಕ
ಜಾಗತಿಕ ಪರಿವರ್ತನೆಯ ಮುಂಚೂಣಿ
ಗಾಗುತ್ತಿದೆ.ಸಂಶೋಧಕರು, ಉದ್ಯಮಿಗಳು ಮತ್ತು ಯುವ ನಾವೀನ್ಯಕಾರರಿಗೆ ಅನುಕೂಲಕರವಾದ
ಆಧುನಿಕ ಪರಿಸರ ವ್ಯವಸ್ಥೆ
ರಚನೆಯಾಗಿದೆ. ಎಂದು ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ಬಣ್ಣಿಸಿದರು.
* ಕಳೆದ ದಶಕದಲ್ಲಿ ಭಾರತದ
R&D ವೆಚ್ಚ ದ್ವಿಗುಣ
ಗೊಂಡಿದ್ದು, ಸ್ಟಾರ್ಟ್–ಅಪ್ ಮತ್ತು ನವೋದ್ಯಮದ ದೃಷ್ಟಿಯಿಂದ ಭಾರತವು
ವಿಶ್ವದಲ್ಲಿ 3ನೇ ದೊಡ್ಡ ಪರಿಸರ ವ್ಯವಸ್ಥೆ
ಯಾಗಿದೆ. ದೇಶದಲ್ಲಿ ನೋಂದಾಯಿತ
ಪೇಟೆಂಟ್ಗಳ ಪ್ರಮಾಣ 17 ಪಟ್ಟು ಹೆಚ್ಚಾಗಿದೆ
ಎಂದು ಅವರು ಹೇಳಿದರು. ಒಟ್ಟಾರೆ, ಈ RDI ನಿಧಿ ಮತ್ತು ನವೀನ ನೀತಿಗಳು
ಆತ್ಮನಿರ್ಭರ ಭಾರತ
ದ ಗುರಿಯನ್ನು ಸಾಧಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆಯಾಗಿವೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
Take Quiz
Loading...