* ಅಮೆರಿಕದ ಟ್ಯಾರಿಫ್ಗಳಿಂದ ಭಾರತೀಯ ಜವಳಿ ಉದ್ಯಮ ತೀವ್ರವಾಗಿ ಬಾಧಿತವಾಗಿದೆ. ಅಮೆರಿಕವೇ ಭಾರತದ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಶೇ. 60ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿರುವುದರಿಂದ ಬಾಂಗ್ಲಾದೇಶ, ವಿಯೆಟ್ನಾಂ ಮುಂತಾದ ದೇಶಗಳೊಂದಿಗೆ ಪೈಪೋಟಿ ಕಷ್ಟವಾಗಿದೆ. ಇದರಿಂದ ಹಲವು ಬಿಲಿಯನ್ ಡಾಲರ್ ಮೌಲ್ಯದ ವ್ಯಾಪಾರ ಕಳೆದುಕೊಳ್ಳುವ ಭೀತಿ ಇದೆ.* ಇದನ್ನು ತಪ್ಪಿಸಲು ಭಾರತ ಸರ್ಕಾರ ಅಮೆರಿಕಕ್ಕೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ವರದಿಗಳ ಪ್ರಕಾರ, ಭಾರತವು ಬ್ರಿಟನ್, ಜಪಾನ್, ಜರ್ಮನಿ, ಫ್ರಾನ್ಸ್, ಇಟಲಿ, ಸೌತ್ ಕೊರಿಯಾ, ಕೆನಡಾ, ಮೆಕ್ಸಿಕೋ, ಟರ್ಕಿ, ಯುಎಇ, ಆಸ್ಟ್ರೇಲಿಯಾ ಸೇರಿದಂತೆ 40 ದೇಶಗಳನ್ನು ಗುರಿಯಾಗಿಸಿಕೊಂಡಿದೆ.* ಈ 40 ದೇಶಗಳು ಒಟ್ಟಾರೆಯಾಗಿ 590 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತವೆ. ಆದರೆ, ಭಾರತದ ಪಾಲು ಕೇವಲ ಶೇ. 5-6 ಮಾತ್ರ. ಹೀಗಾಗಿ, ಭಾರತಕ್ಕೆ ಈ ಮಾರುಕಟ್ಟೆಗಳಲ್ಲಿ ರಫ್ತು ಹೆಚ್ಚಿಸುವ ಅವಕಾಶವಿದೆ.* 2023-24ರಲ್ಲಿ ಭಾರತದ ಜವಳಿ ಉದ್ಯಮದ ಗಾತ್ರ 179 ಬಿಲಿಯನ್ ಡಾಲರ್ ಆಗಿದ್ದು, ಇದರಲ್ಲಿ 37 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಮಾತ್ರ ರಫ್ತು ಮಾಡಲಾಗಿದೆ.* ಜಾಗತಿಕವಾಗಿ 800.77 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳ ಆಮದು ನಡೆಯುತ್ತಿದ್ದು, ಭಾರತದ ಪಾಲು ಶೇ. 4.1 ಮಾತ್ರ.