* ಭಾರತವು ತನ್ನ ಕಾರ್ಯತಂತ್ರದ ಅಂಗವಾಗಿ ಜರ್ಮನಿಯೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಉತ್ಸುಕವಾಗಿದೆ ಎಂಬುದನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜರ್ಮನ್ ಛಾನ್ಸೆಲರ್ ಫ್ರಿಡ್ರಿಚ್ ಮೆರ್ಝ್ ಅವರಿಗೆ ತಿಳಿಸಿದ್ದಾರೆ.* ನೆದರ್ಲೆಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಗೆ ಪ್ರವಾಸ ಕೈಗೊಂಡಿರುವ ಅವರು ಬರ್ಲಿನ್ನಲ್ಲಿ ಈ ಮಾತುಕತೆಗೆ ಕಾಲ ನೀಡಿದರು."ಬರ್ಲಿನ್ನಲ್ಲಿ ಛಾನ್ಸೆಲರ್ ಫ್ರಿಡ್ರಿಚ್ ಮೆರ್ಝ್ ಅವರನ್ನು ಭೇಟಿಯಾಗಿ, ಪ್ರಧಾನಿ ಮೋದಿ ಅವರ ಪರವಾಗಿ ಶುಭಾಶಯಗಳನ್ನು ನೀಡಿದೆ. ಭಾರತವು ಜರ್ಮನಿಯೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರೆಸಲು ಕಾತುರವಾಗಿದೆ. ಭಯೋತ್ಪಾದನೆ ವಿರುದ್ಧ ಜರ್ಮನಿಯ ಸಹಕಾರವನ್ನು ಅಭಿನಂದಿಸಲಾಗಿದೆ" ಎಂದು ಜೈಶಂಕರ್ ಅವರು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.* ಈ ಭೇಟಿಯ ಸಂದರ್ಭದಲ್ಲಿ ಜರ್ಮನಿಯ ಹಣಕಾಸು ಮತ್ತು ಇಂಧನ ಸಚಿವೆ ಕ್ಯಾಥರಿನಾ ರಯೆಸಾ ಅವರ ಜೊತೆಗೂ ಜೈಶಂಕರ್ ಅವರು ಮಾತುಕತೆ ನಡೆಸಿದರು.* ಜರ್ಮನ್ ಸಂಸದರೊಂದಿಗೆ ಗುರುವಾರ ನಡೆದ ಸಂವಾದದಲ್ಲಿ, "ಭಾರತವು ಎಲ್ಲಾ ರೂಪದ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬದ್ಧವಾಗಿದೆ" ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದರು.