* ಭಾರತ-ಇಯು ರಕ್ಷಣಾ, ಭದ್ರತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸಲು ನಿರ್ಧರಿಸಿದ್ದು, ಮುಕ್ತ ವ್ಯಾಪಾರ ಒಪ್ಪಂದವನ್ನು ಈ ವರ್ಷದ ಅಂತ್ಯದೊಳಗೆ ಅಂತಿಮಗೊಳಿಸಲು ಪ್ರಧಾನಿ ಮೋದಿ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ನಿರ್ದೇಶನ ನೀಡಿದ್ದಾರೆ.* ವ್ಯಾಪಾರ ಮತ್ತು ಸುಂಕದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಯ ಬಗ್ಗೆ ಜಾಗತಿಕ ಕಳವಳ ಹೆಚ್ಚುತ್ತಿರುವುದರ ನಡುವೆ ಉಭಯ ನಾಯಕರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.* ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತದ ವ್ಯಾಪಾರ ಮತ್ತು ಸುಂಕ ನೀತಿಯ ಬಗ್ಗೆ ಜಾಗತಿಕ ಕಳವಳ ಹೆಚ್ಚಿದ ಸಂದರ್ಭದಲ್ಲಿ, ಉಭಯ ನಾಯಕರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.* ಭಾರತ-ಪಶ್ಚಿಮ ಏಷ್ಯಾ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನುಷ್ಠಾನಕ್ಕೆ ಬದ್ಧತೆ ವ್ಯಕ್ತಪಡಿಸಿದ ಮೋದಿ, ಹೂಡಿಕೆ ಸಂರಕ್ಷಣಾ ಒಪ್ಪಂದ ಮತ್ತು ಜಿಐ ಕುರಿತ ಮಾತುಕತೆ ಮುಂದುವರಿಯುವ ನಿರೀಕ್ಷೆ ವ್ಯಕ್ತಪಡಿಸಿದರು. IMEC ಜಾಗತಿಕ ವಾಣಿಜ್ಯ ಮತ್ತು ಸುಸ್ಥಿರ ಬೆಳವಣಿಗೆಗೆ ಪ್ರೇರಣೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.