* ಈ ಬಾರಿ ಭಾರತದ ಆತಿಥ್ಯದಲ್ಲಿ ಅತಿ ದೊಡ್ಡ ವಾರ್ಷಿಕ ಶೃಂಗ ಸಭೆ ಜಿ-20 ಯು ಶನಿವಾರ (ಸೆ.9) ಆರಂಭವಾಗಲಿದೆ. ಜಿ-20 ಸಭೆಗಾಗಲಿ ದೆಹಲಿಯಲ್ಲಿ ಈಗಾಗಲೇ ಭರದ ಸಿದ್ದತೆ ನಡೆದಿದೆ.* ಈ ಜಿ-20 ಶೃಂಗ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಹಿಸಿಕೊಂಡಿದ್ದಾರೆ. ಜಗತ್ತಿನ 17 ದೇಶಗಳು ಹಾಗೂ ಐರೋಪ್ಯ ಒಕ್ಕೂಟ ನಾಯಕರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.* ಈ ಶೃಂಗ ಸಭೆಯಲ್ಲಿ ರಷ್ಯಾ ಉಕ್ರೇನ್ ಯುದ್ಧದ ಕುರಿತು ಚರ್ಚಿಸಲಾಗುತ್ತದೆ ಮತ್ತು ಆಹಾರ ಭದ್ರತೆ ಹಾಗೂ ಹಣದುಬ್ಬರ ಕೂಡ ಪ್ರಮುಖ ಚರ್ಚಾ ವಿಷಯವಾಗುವ ಸಂಭವವಿದೆ.*  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಈ ಜಿ-20 ಸಭೆಗೆ ಗೈರು ಆಗುತ್ತಿದ್ದಾರೆ.* ಜಿ-20 ಸದಸ್ಯ ರಾಷ್ಟ್ರಗಳು : ಭಾರತ, ಅಮೆರಿಕ, ಕೆನಡಾ, ಮೆಕ್ಸಿಕೊ, ಅರ್ಜೆಂಟಿನಾ, ಬ್ರೆಜಿಲ್, ಸೌದಿ ಅರೇಬಿಯಾ, ಇಟಲಿ, ಫ್ರಾನ್ಸ್, ಬ್ರಿಟನ್, ಚೀನಾ, ನೆದರ್ಲ್ಯಾಂಡ್, ಟರ್ಕಿ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಮಾರಿಷಸ್, ಸಿಂಗಾಪುರ, ಜಪಾನ್,ಇಂಡೋನೇಷ್ಯಾ ಹಾಗೂ ದಕ್ಷಿಣ ಕೊರಿಯಾ.