* ಭಾರತ ಮತ್ತು ಇಂಡೋನೇಷ್ಯಾ ನೌಕಾಪಡೆಯ ನಡುವೆ ಕಡಲ ಸಹಕಾರ ಬಲಪಡಿಸಿ, ಪರಸ್ಪರ ಸ್ನೇಹ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ IND-INDO CORPAT ಸಮರಾಭ್ಯಾಸದ 44ನೇ ಆವೃತ್ತಿಯನ್ನು ಇಂಡೋನೇಷ್ಯಾದ ಬೆಲಾವನ್ನಲ್ಲಿ ಆಯೋಜಿಸಲಾಯಿತು.* ಈ ಸಮರಾಭ್ಯಾಸವು ಭಾರತ ಸರ್ಕಾರದ 'ಮಹಾಸಾಗರ್' ಉಪಕ್ರಮಕ್ಕೆ ಸಹಕಾರಿಯಾಗಿದ್ದು, ಒಟ್ಟಾರೆ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.* ಅಕ್ರಮ ಹಾಗೂ ನಿಯಂತ್ರಣರಹಿತ ಮೀನುಗಾರಿಕೆ, ಮಾದಕವಸ್ತುಗಳ ಕಳ್ಳಸಾಗಣೆ, ಕಡಲ ಭಯೋತ್ಪಾದನೆ, ಸಶಸ್ತ್ರ ದರೋಡೆ ಮತ್ತು ಕಡಲ್ಗಳ್ಳತನವನ್ನು ತಡೆಗಟ್ಟಲು ಈ ಅಭ್ಯಾಸ ಪ್ರಮುಖವಾಗಿದೆ.* ಕಳ್ಳಸಾಗಣೆ ಮತ್ತು ಅಕ್ರಮ ವಲಸೆಯ ನಿಯಂತ್ರಣದೊಂದಿಗೆ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಮಾಹಿತಿ ಹಂಚಿಕೆಯಿಂದ ಸಂಯುಕ್ತ ಕಾರ್ಯಪಟುತ್ವವನ್ನು ಹೆಚ್ಚಿಸಲು ಸಹಾಯವಾಗಲಿದೆ.* “ಕಡಲ ನೆರೆಯ ರಾಷ್ಟ್ರಗಳಾಗಿ ನಾವಿಬ್ಬರೂ ರಕ್ಷಣಾತ್ಮಕ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಮತ್ತೊಮ್ಮೆ ಹೂಡುಕಿದರು.