* ಭಾರತೀಯ ನೌಕಾಪಡೆ ಮತ್ತು ಗ್ರೀಸ್ ನೌಕಾಪಡೆ (ಹೆಲೆನಿಕ್ ನೌಕಾಪಡೆ) ಮುಂಬೈ ಬಳಿ ಅರೇಬಿಯನ್ ಸಮುದ್ರದಲ್ಲಿ ಪ್ಯಾಸೆಕ್ಸ್ (PASSEX) ಎಂಬ ಜಂಟಿ ಸಮುದ್ರ ವ್ಯಾಯಾಮ ನಡೆಸಿದವು. * ಈ ಕವಾಯತಿನಿಂದ ಎರಡು ದೇಶಗಳ ನಡುವಿನ ಸಮುದ್ರ ಸಹಕಾರ ಮತ್ತು ನೌಕಾ ಸಮನ್ವಯ ಬಲಪಟ್ಟಿದೆ.* ಪ್ಯಾಸೆಕ್ಸ್ ವ್ಯಾಯಾಮವು ಭಾರತ-ಗ್ರೀಸ್ ರಕ್ಷಣಾ ಸಂಬಂಧ ಬಲಪಡಿಸುವ ಪ್ರಯತ್ನದ ಭಾಗವಾಗಿದೆ. 2023ರಲ್ಲಿ ಪ್ರಧಾನಿ ಮೋದಿಯವರು ಗ್ರೀಸ್ಗೆ ಭೇಟಿನೀಡಿದ ನಂತರ, ಈ ದೇಶಗಳು ತಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಉತ್ತೇಜಿಸಿವೆ.* ಭಾರತೀಯ ನೌಕಾಪಡೆಯ ತಲ್ವಾರ್-ಕ್ಲಾಸ್ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ತರ್ಕಶ್ ಮತ್ತು ಗ್ರೀಕ್ ನೌಕೆಯ ಎಚ್ಎಸ್ ಪ್ಸಾರಾ ಈ ಸಮುದ್ರ ವ್ಯಾಯಾಮದಲ್ಲಿ ಭಾಗವಹಿಸಿದವು.* ವ್ಯಾಯಾಮದಲ್ಲಿ ಯುದ್ಧ ತಂತ್ರದ ಚಲನೆಗಳು, ಸರ್ಫೇಸ್ ಫೈರಿಂಗ್, ಹೆಲಿಕಾಪ್ಟರ್ ಲ್ಯಾಂಡಿಂಗ್, ಮರುಪೂರಣ ಮತ್ತು ಅಗ್ನಿಶಾಮಕ ತರಬೇತಿಗಳಂತಹ ಚಟುವಟಿಕೆಗಳು ನಡೆದವು.* 2012ರಲ್ಲಿ ಸೇರ್ಪಡೆಯಾದ ಐಎನ್ಎಸ್ ತರ್ಕಶ್, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಬಹುಪಯೋಗಿ ಹೆಲಿಕಾಪ್ಟರ್ಗಳಿಂದ ಲಸಗಿತವಾಗಿದ್ದು, ಇದು ಯುದ್ಧ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.